ಹೊಸದಿಗಂತ ವರದಿ ಬೆಳಗಾವಿ :
ಬೆಳಗಾವಿ ಮೂಲದ ವ್ಯಕ್ತಿ ಗೋವಾದ ಬಾಗಾ ಬೀಚ್ ಬಳಿಯ ಅಪಾರ್ಟ್ಮೆಂಟ್ನಲ್ಲಿ ಕೆಲಸಕ್ಕೆ ಹೋಗಿದ್ದ ತೆರಳಿದ್ದ ಬೆಳಗಾವಿಯ ಯುವಕನೊಬ್ಬ ಆಕಸ್ಮಿಕವಾಗಿ ಲಿಫ್ಟ್ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಗಳಲ್ಲಿ ಗುತ್ತಿಗೆ ಆದಾರದಲ್ಲಿ ಕೆಲಸ ತೆಗೆದುಕೊಳ್ಳುತ್ತಿದ್ದ ಯುವಕ, ಆರು ಮಹಡಿಯ ಮೇಲಿಂದ ಕೆಳಕ್ಕೆ ಬಿದ್ದುಸಾವನಪ್ಪಿದ್ದಾನೆ. ಮೃತ ಯುವಕ ಬೆಳಗಾವಿ ತಾಲೂಕಿನ ಕಂಗ್ರಾಳಿ ಬಿ.ಕೆ ಗ್ರಾಮದ ನಿವಾಸಿ ವಿವೇಕ್ ವಿಜಯ್ ಹುದ್ದಾರ (25) ಎನ್ನಲಾಗಿದೆ.
ಇದನ್ನೂ ಓದಿ: ಪಬ್‌ನಲ್ಲಿ ಪಾರ್ಟಿ ಮಾಡಿ, ಮನೆಗೆ ಹೋಗೋಕೆ ಹೆದರಿ ಪ್ರಾಣಬಿಟ್ಟ ಅಪ್ರಾಪ್ತ ವಯಸ್ಸಿನ ಬಾಲಕ
ಗೋವಾದ ಬಾಗಾ ಬೀಚ್ ಸಮೀಪದ ನಿರ್ಮಾಣ ಹಂತದ ಅಪಾರ್ಟ್ಮೆಂಟ್ ನಲ್ಲಿ ಸೈಡಿಂಗ್ ಕಿಟಕಿಗಳನ್ನು ಅಳವಡಿಸುವ ಕೆಲಸಕ್ಕಾಗಿ ವಿವೇಕ್ ತೆರಳಿದ್ದನು. ಸೋಮವಾರ ಬೆಳಗಿನ ಜಾವ ಸುಮಾರು 4:45ಕ್ಕೆ ನೈಸರ್ಗಿಕ ಕರೆಗೆ ತೆರಳಿದ್ದಾಗ, ಅಯತಪ್ಪಿ ಆರನೇ ಮಹಡಿಯಿಂದ ಲಿಫ್ಟ್ ಗುಂಡಿಗೆ ಬಿದ್ದಿರುವುದರಿಂದ, ಗಂಭೀರವಾಗಿ ಗಾಯಗೊಂಡಿದ್ದ, ಕೂಡಲೇ ಚಿಕಿತ್ಸೆಗೆ ಆಸ್ಪತ್ರೆಗೆರೆರಳುವ ಮಾರ್ದದ ಮಂದೆಯೇ ಸಾವನ್ನಪ್ಪಿದ್ದಾನೆ.
ಈ ಘಟನೆಯ ಕುರಿತು ಗೋವಾದ ಅಂಜುನಾ ಪೊಲೀಸ್ ಠಾಣೆಯಲ್ಲಿ ಪುಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ದುಡಿಮೆಗಾಗಿ ಹೋದ ಯುವಕ ಹೆಣವಾಗಿ ಮರಳಿದ್ದು ಗ್ರಾಮಸ್ಮರಲ್ಲಿ ಮತ್ತು ಸಂಬಂಧಿಕರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.



