ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ T20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ 84 ಹಾಗೂ ರಿಂಕು ಸಿಂಗ್ 44 ರನ್ ಗಳ ಭರ್ಜರಿ ಆಟಕ್ಕೆ ಭಾರತ ತಂಡ 238 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಸಂಜು ಸ್ಯಾಮ್ಸನ್ (10) ಹಾಗೂ ಇಶಾನ್ ಕಿಶನ್ ಇಬ್ಬರು ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ಆದರೆ ಅಭಿಷೇಕ್ ಶರ್ಮಾ ಎಂದಿನಂತೆ ಸ್ಫೋಟಕ ಬ್ಯಾಟಿಂಗ್ ನಡೆಸಿದರು. 3ನೇ ವಿಕೆಟ್ ಜೊತೆಯಾಟದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ 47 ಎಸೆತಗಳಲ್ಲಿ 99 ರನ್ ಸೇರಿಸಿದರು. ನಾಯಕ ಸೂರ್ಯ ಇಂದು 22 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ಗಳ ಸಹಿತ 32 ರನ್ಗಳಿಸಿ ಸ್ಯಾಂಟ್ನರ್ಗೆ ವಿಕೆಟ್ ಒಪ್ಪಿಸಿದರು.
ಅಭಿಷೇಕ್ ಶರ್ಮಾ ಕೇವಲ 35 ಎಸೆತಗಳಲ್ಲಿ 5 ಬೌಂಡರಿ, 8 ಸಿಕ್ಸರ್ಗಳ ಸಹಿತ 84 ರನ್ಗಳಿಸಿ ಇಶ್ ಸೋಧಿ ಬೌಲಿಂಗ್ನಲ್ಲಿ ಕೈಲ್ ಜೇಮಿಸನ್ಗೆ ಕ್ಯಾಚ್ ನೀಡಿ ಶತಕ ಮಿಸ್ ಮಾಡಿಕೊಂಡರು.
ನಂತರ ಬಂದ ಹಾರ್ದಿಕ್ ಪಾಂಡ್ 16 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 25 ರನ್ಗಳಿಸಿದರೆ, ರಿಂಕು ಸಿಂಗ್ ಕೇವಲ 20 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಿತ ಅಜೇಯ 44 ರನ್ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು. ದುಬೆ 9, ಅಕ್ಷರ್ ಪಟೇಲ್ 5 ರನ್ಗಳಿಸಿದರು


