Sunday, January 25, 2026
Sunday, January 25, 2026
spot_img

ಅಭಿಷೇಕ್‌, ಸೂರ್ಯ ಬ್ಯಾಟಿಂಗ್‌ ಅಬ್ಬರ: 60 ಎಸೆತಗಳಲ್ಲಿ ಗೆಲುವಿನ ದಡ ಸೇರಿದ ಭಾರತ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯ ಪಡೆ ಏಕಪಕ್ಷೀಯವಾಗಿ ಗೆದ್ದುಕೊಂಡಿದೆ. ಈ ಮೂಲಕ 3-0 ಅಂತರದಲ್ಲಿ ಇನ್ನು ಎರಡು ಪಂದ್ಯಗಳು ಬಾಕಿ ಇರುವಂತೆಯೇ ಐದು ಪಂದ್ಯಗಳ ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್ 153 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 10 ಓವರ್​ಗಳಲ್ಲಿ 2 ವಿಕೆಟ್​ಗಳನ್ನು ಕಳೆದುಕೊಂಡು ಸುಲಭವಾಗಿ ಗೆಲುವಿನ ದಡ ಮುಟ್ಟಿತು. ಟೀಂ ಇಂಡಿಯಾ ಪರ ಅಭಿಷೇಕ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಸಿಡಿಲಬ್ಬರದ ಅರ್ಧಶತಕ ಸಿಡಿಸಿ ಮಿಂಚಿದರು.

ಆರಂಭಿ ಬ್ಯಾಟರ್‌ ಸಂಜು ಸ್ಯಾಮ್ಸನ್‌(0) ವಿಕೆಟ್‌ ಕಳೆದುಕೊಂಡಿತು. ಆದರೆ ಇಶಾನ್‌ ಇಶನ್‌ ಮತ್ತು ಅಭಿಷೇಕ್‌ ಶರ್ಮ ಬಿರುಸಿನ ಬ್ಯಾಟಿಂಗ್‌ ನಡೆಸಿ ಕೇವಲ 19 ಎಸೆತಗಳಲ್ಲಿ 53 ರನ್‌ಗಳ ಜತೆಯಾಟ ನಡೆಸಿದರು. ಇಶಾನ್‌ ಇಶನ್‌ 13 ಎಸೆತಗಳಲ್ಲಿ 28 ರನ್‌ ಚಚ್ಚಿದರು. ಇಶಾನ್‌ ವಿಕೆಟ್‌ ಪತನದ ಬಳಿಕ ಸೂರ್ಯಕುಮಾರ್‌ ಮತ್ತು ಅಭಿಷೇಕ್‌ ಸಿಕ್ಸರ್‌ ಮತ್ತು ಬೌಂಡರಿಗಳ ಮಳೆಯನ್ನೇ ಸುರಿಸಿ ನೆರೆದಿದ್ದ ಪ್ರೇಕ್ಷಕರನ್ನು ಬರಪೂರ ರಂಜಿಸಿದರು.

ಅಭಿಷೇಕ್‌ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, 23 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅಂತಿಮವಾಗಿ ಸೂರ್ಯಕುಮಾರ್‌ 6 ಬೌಂಡರಿ ಮತ್ತು 3 ಸಿಕ್ಸರ್‌ ಸಿಡಿಸಿ ಅಜೇಯ 57 ರನ್‌ ಗಳಿಸಿದರು. ಅಭಿಷೇಕ್‌ 20 ಎಸೆತಗಳಲ್ಲಿ ಅಜೇಯ 68 ರನ್‌ ಬಾರಿಸಿದರು.

Must Read