ಹೊಸದಿಗಂತ ವರದಿ ಗೋಕರ್ಣ:
ಆಕಸ್ಮಿಕ ಬೆಂಕಿ ತಗುಲಿ ಕಟ್ಟಿಗೆ ಮಿಲ್ ಸಂಪೂರ್ಣ ನಾಶವಾಗಿ 35 ಲಕ್ಷ ರೂ.ಗೂ ಹೆಚ್ಚು ಹಾನಿಯಾದ ಘಟನೆ ಶನಿವಾರ ಬೆಳಗಿನ ಜಾವ ಹೊಸ್ಕೇರಿಯಲ್ಲಿ ನಡೆದಿದೆ.
ಹನೇಹಳ್ಳಿ ಗ್ರಾಮ ಪಂಚಾಯತ್ ಹತ್ತಿರದ ಶಂಕರ ಆಚಾರಿ ಎಂಬುವವರಿಗೆ ಸೇರಿದ ಕಟ್ಟಿಗೆ ಮಿಲ್ನಲ್ಲಿ ವಿದ್ಯುತ್ ಶಾರ್ಟ್ಸರ್ಕೀಟ್ನಿಂದ ಈ ಅವಘಡ ನಡೆದಿದೆ ಎನ್ನಲಾಗಿದೆ. ಅಂಕೋಲಾ ಮತ್ತು ಕುಮಟಾದ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಿಯಂತ್ರಣಕ್ಕೆ ತಂದಿದ್ದಾರೆ.
ಕಟ್ಟಿಗೆ ಮಿಲ್‌ಗೆ ಆಕಸ್ಮಿಕ ಬೆಂಕಿ: ಲಕ್ಷಾಂತರ ರೂಪಾಯಿ ಹಾನಿ

