ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ ಮತ್ತೆ ಅರೆಸ್ಟ್ ಆಗಿದ್ದಾರೆ. ಇದರ ಬೆನ್ನಲ್ಲೇ ವಿಜಯಲಕ್ಷ್ಮೀ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಅವರು ಮನಸ್ಸು ಒಡೆದಿದೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ.
ನಟ ದರ್ಶನ್ ಮೊದಲ ಬಾರಿ ಬಂಧನದ ಬಳಿಕವೂ ಸೈಲೆಂಟ್ ಆಗಿಯೇ ಇದ್ದರು ವಿಜಯಲಕ್ಷ್ಮೀ. ದರ್ಶನ್ ಜಾಮೀನು ಪಡೆದು ಬಿಡುಗಡೆ ಆದ ಬಳಿಕ ಖುಷಿಪಟ್ಟವರು, ಮತ್ತೊಬ್ಬರು ಇದೀಗ ದರ್ಶನ್ ಈಗ ಮತ್ತೆ ಅರೆಸ್ಟ್ ಆಗಿರೋದು ಬೇಸರ ಮೂಡಿಸಿದೆ.
ಪೋಸ್ಟ್ನಲ್ಲಿ ಅವರು ದರ್ಶನ್ ಬ್ಯಾಕ್ ಪೋಸ್ನ ಫೋಟೋ ಹಾಕಿದ್ದಾರೆ. ದರ್ಶನ್ ಸರಳಿನ ಹಿಂದೆ ನಿಂತು ಏನನ್ನೋ ನೋಡುತ್ತಿದ್ದಾರೆ. ಈ ಪೋಸ್ಟ್ಗೆ ಅವರು ಒಡೆದ ಹೃದಯದ ಎಮೋಜಿ ಹಾಕಿದ್ದಾರೆ. ಎಲ್ಲವನ್ನೂ ಅವರು ಸೂಕ್ಷ್ಮವಾಗಿ ಹೇಳಿದ್ದಾರೆ.