March 10, 2026
Tuesday, March 10, 2026
spot_img

ನಟಿ ಆಶಿಕಾ ರಂಗನಾಥ್ ಸಂಬಂಧಿ ಆತ್ಮಹತ್ಯೆ: ಯುವತಿ ಸಾವಿನ ರಹಸ್ಯ ಬಯಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಆಶಿಕಾ ರಂಗನಾಥ್ ಸಂಬಂಧಿ ಯುವತಿ ಡ್ರಗ್‌ ಅಡಿಕ್ಟ್‌ ಯುವಕನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಪಾಂಡುರಂಗ ನಗರದಲ್ಲಿ ನಡೆದಿದೆ.

ಹಾಸನ ಮೂಲದ ಯುವತಿ ಬೆಂಗಳೂರಿನ ಪಾಂಡುರಂಗ ನಗರದಲ್ಲಿರುವ ಸಂಬಂಧಿಕರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ. ಅಚಲ (22) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಎಂಜಿನಿಯರಿಂಗ್‌ ಮುಗಿಸಿ ಕೆಲಸಕ್ಕೆ ಸೇರುವ ತಯಾರಿಯಲ್ಲಿದ್ದ ಯುವತಿ ಅಚಲ ತನ್ನ ದೂರದ ಸಂಬಂಧಿ ಮಯಾಂಕ್‌ ಜೊತೆ ಸ್ನೇಹ ಹೊಂದಿದ್ದರು. ಇದೇ ವೇಳೆ ಪ್ರೀತಿಸುವುದಾಗಿ ನಂಬಿಸಿ ಸುತ್ತಾಡುತ್ತಿದ್ದ ಮಯಾಂಕ್‌ ಮದುವೆಗೆ ಮೊದಲೇ ದೈಹಿಕ ಸಂಬಂಧಕ್ಕೆ ಒತ್ತಾಯಿಸಿದ್ದ. ಡ್ರಗ್‌ ಅಡಿಕ್ಟ್‌ ಆಗಿದ್ದ ಮಯಾಂಕ್‌ ಪದೇ ಪದೇ ಸಂಪರ್ಕಕ್ಕೆ ಪೀಡಿಸುತ್ತಿದ್ದ. ಇದಕ್ಕೆ ಅಚಲ ಒಪ್ಪದಿದ್ದಕ್ಕೆ ದೈಹಿಕ ಹಲ್ಲೆ ನಡೆಸಿ ಮಾನಸಿಕವಾಗಿಯೂ ಕಿರುಕುಳ ಕೊಡ್ತಿದ್ದ. ಪದೇ ಪದೇ ಫೋನ್‌ ಮಾಡಿ ಕಿರುಕುಳ ನೀಡುತ್ತಿದ್ದ ಇದರಿಂದ ಬೇಸತ್ತ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಚಲ ತಾಯಿ ಕಣ್ಣೀರಿಟ್ಟಿದ್ದಾರೆ.

ನಟಿ ಆಶಿಕಾ ರಂಗನಾಥ್‌ ಮಾವನ ಮಗಳೂ ಆಗಿರುವ ಅಚಲ ಎಂಜಿನಿಯರಿಂಗ್‌ ಮುಗಿಸಿ ಕೆಲಸಕ್ಕೆ ತಯಾರಿ ನಡೆಸಿದ್ದಳು. ಹೀಗಿರುವಾಗಲೇ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಯಾಂಕ್​ ಎಂಬಾತ ಮೃತ ಯುವತಿ ಅಚಲ ತನ್ನ ದೂರದ ಸಂಬಂಧಿಯೇ ಆಗಿದ್ದನಂತೆ. ಪ್ರೀತಿಸೋದಾಗಿ ನಂಬಿಸಿ ಅಚಲ ಜೊತೆ ಸುತ್ತಾಡಿದ್ದ ಈತ, ಮದುವೆಗೆ ಮೊದಲೇ ದೈಹಿಕ‌ ಸಂಬಂಧಕ್ಕೆ ಪೀಡಿಸಿದ್ದ ಎನ್ನಲಾಗ್ತಿದೆ. ಇದಕ್ಕೆ ಯುವತಿ ಒಪ್ಪದಿದ್ದಾಗ ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ ಮಾನಸಿಕ‌ ಕಿರುಕುಳ ನೀಡಿದ್ದಾನೆ ಎಂದು ಪೋಷಕರು ಆರೋಪ ಮಾಡಿದ್ದಾರೆ.

ಪ್ರೇಮಿ ಮಯಾಂಕ್ ಮೋಸ ಮಾಡಿದ್ದಾನೆಂದು ಅಚಲ ಮಾಡಿದ್ದ ಮೆಸೇಜ್ ನಿಂದ ದೃಢಪಟ್ಟಿದೆ. ಅಚಲ, ಜೀವನದಲ್ಲಿ ನಿನ್ನ ಬಿಟ್ಟು ನನಗೆ ಬದುಕಲು ಸಾಧ್ಯವಿಲ್ಲ. ನೀನು ನನಗೆ ಮೋಸ ಮಾಡಿದರೂ ನಿನ್ನನ್ನು ಮರೆಯಲು ಆಗುತ್ತಿಲ್ಲ. ನನ್ನ ಕನಸುಗಳನ್ನು ನೀನು ನುಚ್ಚು ನೂರು ಮಾಡಿದ್ದೀಯ ಎಂದು ಪ್ರಿಯಕರ ಮಯಾಂಕ್​​ಗೆ ಮೆಸೇಜ್ ಮಾಡಿದ್ದಾಳೆ. ನನಗೆ ನೀನು ಮೋಸ ಮಾಡಿಲ್ಲವಾದರೆ ರಾಘವೇಂದ್ರ ಸ್ವಾಮಿ ಮೇಲೆ ಆಣೆ ಮಾಡು. ನೀನು ಮಾಡಿದ ಮೋಸಕ್ಕೆ ತಕ್ಕ ಬೆಲೆ ಕಟ್ಟಲೇ ಬೇಕು ಎಂದು ತನ್ನ ನೋವನ್ನು ಮೆಸೇಜ್​​ನಲ್ಲಿ ಹೇಳಿಕೊಂಡಿದ್ದಾಳೆ.

ಬೆಂಗಳೂರಿನ ಪುಟ್ಟೇನಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಹಾಸನದ ಮಯಾಂಕ್ ಮತ್ತು ಆತನ ತಾಯಿ ಮೈನಾ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆ ನಡೆದು 10 ದಿನ ಕಳೆದರೂ ಆರೋಪಿಗಳ ಬಂಧನವಾಗಿಲ್ಲ. ಆರೋಪಿಗಳ ಬಂಧಿಸದಕ್ಕೆ ಮೃತ ಅಚಲ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !