March 6, 2026
Friday, March 6, 2026
spot_img

ಬರಿಗಾಲಿನಲ್ಲಿ 3,550 ಮೆಟ್ಟಿಲು ಹತ್ತಿದ ನಟಿ: ಹುಟ್ಟುಹಬ್ಬದಂದು ತಿರುಪತಿಗೆ ಜಾನ್ವಿ ಕಪೂರ್ ಭೇಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಜಾನ್ವಿ ಕಪೂರ್ ತಮ್ಮ 29ನೇ ಹುಟ್ಟುಹಬ್ಬದ ಪ್ರಯುಕ್ತ ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿಯೂ ದರ್ಶನಕ್ಕಾಗಿ ತಿರುಪತಿಗೆ ಬಂದ ಅವರು, ಬೆಟ್ಟದ ಮೆಟ್ಟಿಲು ಮಾರ್ಗವಾಗಿ ಬರಿಗಾಲಿನಲ್ಲಿ ಸುಮಾರು 3,550 ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನ ಪಡೆದರು.

ಇದನ್ನೂ ಓದಿ:

ತಿರುಪತಿ ಬೆಟ್ಟ ಹತ್ತುವ ವೇಳೆ ಜಾನ್ವಿ ಬಿಳಿ ಬಣ್ಣದ ಫ್ಲೋರಲ್ ಕುರ್ತಾ ಧರಿಸಿದ್ದು, ಸರಳ ಉಡುಪಿನಲ್ಲಿ ಕಾಣಿಸಿಕೊಂಡಿದ್ದರು. ಸುಮಾರು 9 ರಿಂದ 12 ಕಿಲೋಮೀಟರ್ ದೂರದ ಈ ಮಾರ್ಗವನ್ನು ಅವರು 4 ರಿಂದ 5 ಗಂಟೆಗಳಲ್ಲೇ ಪೂರ್ಣಗೊಳಿಸಿದ್ದಾರೆ. ಈ ಸಂದರ್ಭದ ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅವರ ಭಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ತಿರುಪತಿ ಭೇಟಿ ಸಂದರ್ಭದಲ್ಲಿ ಜಾನ್ವಿ ಜೊತೆ ಅವರ ಸ್ನೇಹಿತ ಶಿಖರ್ ಪಹರಿಯಾ ಕಾಣಿಸಿಕೊಳ್ಳುತ್ತಾರೆ. ಆದರೆ ಈ ಬಾರಿ ಅವರು ಇತರ ಸ್ನೇಹಿತರೊಂದಿಗೆ ಬೆಟ್ಟ ಹತ್ತಿರುವುದು ಗಮನ ಸೆಳೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !