February 22, 2026
Sunday, February 22, 2026
spot_img

ಮಗಳಿಗಾಗಿ ಕಣಕ್ಕಿಳಿದ ನಟಿ ಕಾವ್ಯಾ ಗೌಡ: ಓರಗಿತ್ತಿ ವಿರುದ್ಧ ಸಿಸಿಟಿವಿ ಸಾಕ್ಷ್ಯ ರಿಲೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಿರುತೆರೆಯ ಜನಪ್ರಿಯ ನಟಿ ಕಾವ್ಯಾ ಗೌಡ ಅವರ ಕೌಟುಂಬಿಕ ಕಲಹ ಈಗ ಕಾನೂನು ಸಮರಕ್ಕೆ ತಿರುಗಿದೆ. ಕಾವ್ಯಾ ಗೌಡ ಮತ್ತು ಅವರ ಓರಗಿತ್ತಿ ಪ್ರೇಮಾ ನಡುವಿನ ಜಗಳ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಇದೀಗ ಕಾವ್ಯಾ ಅವರು ಪ್ರೇಮಾ ಅವರ ಮೇಲೆ ಗಂಭೀರ ಆರೋಪ ಮಾಡಿ ವಿಡಿಯೋ ಸಾಕ್ಷ್ಯಗಳನ್ನು ಬಿಡುಗಡೆ ಮಾಡಿದ್ದಾರೆ.

ಕಾವ್ಯಾ ಮತ್ತು ಅವರ ಪತಿ ಹಾಗೂ ಪ್ರೇಮಾ ಮತ್ತು ಅವರ ಪತಿಯ ನಡುವೆ ಸಂಭವಿಸಿದ ಗಲಾಟೆ ವಿಕೋಪಕ್ಕೆ ಹೋಗಿದೆ. ಮೊದಲು ಕಾವ್ಯಾ ದೂರು ದಾಖಲಿಸಿದರೆ, ಬಳಿಕ ಪ್ರೇಮಾ ಕೂಡ ಪ್ರತಿ ದೂರು ನೀಡಿದ್ದರು. ಆದರೆ, ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸಾರಲು ಕಾವ್ಯಾ ಈಗ ವಿಡಿಯೋ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕಾವ್ಯಾ ಹಂಚಿಕೊಂಡಿರುವ ವಿಡಿಯೋದಲ್ಲಿ ಪ್ರೇಮಾ ಅವರು ಚಪ್ಪಲಿ ಎಸೆದು ಹಲ್ಲೆ ಮಾಡಲು ಯತ್ನಿಸಿರುವುದು ಕಂಡುಬಂದಿದೆ ಎನ್ನಲಾಗಿದೆ.

“ನಾನು ಈ ವಿಡಿಯೋವನ್ನು ಜನವರಿ 26ಕ್ಕೇ ಬಿಡುಗಡೆ ಮಾಡಬೇಕಿತ್ತು, ಆದರೆ ವಕೀಲರ ಸಲಹೆಯಂತೆ ಸುಮ್ಮನಿದ್ದೆ” ಎಂದು ಕಾವ್ಯಾ ತಿಳಿಸಿದ್ದಾರೆ.

ಜಗಳದ ವೇಳೆ ಪ್ರೇಮಾ ಅವರು ಕಾವ್ಯಾ ಅವರ ಮಗಳನ್ನು ‘ಕಳ್ಳಿ’ ಎಂದು ಕರೆದಿದ್ದೇ ಇಷ್ಟೆಲ್ಲಾ ಗಲಾಟೆಗೆ ಪ್ರಮುಖ ಕಾರಣವಂತೆ. ಒಬ್ಬ ತಾಯಿಯಾಗಿ ತನ್ನ ಮಗಳ ಮೇಲಿನ ಆರೋಪವನ್ನು ಸಹಿಸಲು ಸಾಧ್ಯವಾಗದೇ ತಾನು ಧ್ವನಿ ಎತ್ತಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಬೆಡ್‌ರೂಮ್‌ನಲ್ಲಿ ಸಿಸಿಟಿವಿ ಅಳವಡಿಸಿರುವ ಬಗ್ಗೆ ಕೇಳಿಬಂದ ಟೀಕೆಗಳಿಗೆ ಉತ್ತರಿಸಿದ ನಟಿ, “ನನ್ನ ಮಗಳ ಭದ್ರತೆ ನಮಗೆ ಮುಖ್ಯ. ಆ ಉದ್ದೇಶದಿಂದ ಕ್ಯಾಮೆರಾ ಅಳವಡಿಸಿದ್ದೇವೆಯೇ ಹೊರತು ಬೇರೆ ಯಾವುದೇ ಕೆಟ್ಟ ಉದ್ದೇಶ ನಮಗಿಲ್ಲ” ಎಂದು ಹೇಳಿದ್ದಾರೆ.

“14 ವರ್ಷಗಳ ಚಿತ್ರರಂಗದ ಜೀವನದಲ್ಲಿ ನಾನು ಎಂದೂ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದವಳಲ್ಲ. ನನ್ನ ಗೌರವಕ್ಕೆ ಧಕ್ಕೆ ಬಂದಾಗ ಸುಮ್ಮನಿರಲು ಸಾಧ್ಯವಾಗಲಿಲ್ಲ. ಸತ್ಯವೇನೆಂದು ಜನರಿಗೆ ತಿಳಿಯಲಿ ಎಂದು ಕೆಲವೇ ಕೆಲವು ವಿಡಿಯೋಗಳನ್ನು ಈಗ ಹಂಚಿಕೊಂಡಿದ್ದೇನೆ, ಉಳಿದದ್ದನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇನೆ” ಎಂದು ಕಾವ್ಯಾ ಗೌಡ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !