Friday, October 24, 2025

ಜಾಹೀರಾತು ಉದ್ಯಮದ ದಂತಕಥೆ ಪಿಯೂಷ್ ಪಾಂಡೆ ಇನ್ನಿಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಜಾಹೀರಾತು ಉದ್ಯಮದ ದಂತಕಥೆ ಪಿಯೂಷ್ ಪಾಂಡೆ ಶುಕ್ರವಾರ ಮುಂಜಾನೆ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಪ್ರಧಾನಿ ನರೇಂದ್ರ ಮೋದಿಯವರ 2014 ರ ಚುನಾವಣಾ ಪ್ರಚಾರದ ಸಮಯದಲ್ಲಿ ಅಬ್ ಕೀ ಬಾರ್ ಮೋದಿ ಸರ್ಕಾರ್ ಎಂದು ಹೊಸ ಸ್ಲೋಗನ್ ನೀಡಿ ಸಂವಹನ ಪ್ರಯತ್ನಗಳಿಗೆ ಹೆಸರುವಾಸಿಯಾಗಿದ್ದರು. ಇಷ್ಟೇ ಅಲ್ಲದೆ, ಏಷಿಯನ್ ಪೇಂಟ್ಸ್, ಕ್ಯಾಡಬರೀ, ಫಿವಿಕಲ್, ಹಚ್ ಸೇರಿದಂತೆ ಅನೇಕ ಕಂಪನಿಗಳ ಜಾಹೀರಾತುಗಳಿಗೆ ಆಧುನಿಕ ಟಚ್ ನೀಡಿದ್ದರು.

ಪಿಯೂಷ್ ಪಾಂಡೆ ನಿಧನಕ್ಕೆ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಪಿಯೂಷ್ ಗೋಯಲ್ ಸಂತಾಪ ಸೂಚಿಸಿದ್ದಾರೆ.

ಪಾಂಡೆ ಅವರನ್ನು ಭಾರತೀಯ ಜಾಹೀರಾತಿನ “ಟೈಟಾನ್ ಮತ್ತು ದಂತಕಥೆ” ಎಂದು ಕರೆದ ನಿರ್ಮಲಾ ಸೀತಾರಾಮನ್, ದೈನಂದಿನ ಭಾಷಾವೈಶಿಷ್ಟ್ಯಗಳು, ಹಾಸ್ಯ ಮತ್ತು ನಿಜವಾದ ಭಾವವನ್ನು ತರುವ ಮೂಲಕ ಅವರು ಸಂವಹನವನ್ನು ಪರಿವರ್ತಿಸಿದ್ದರು ಎಂದು ಹೇಳಿದರು.

error: Content is protected !!