ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ ಪ್ರತಿಷ್ಠಿತ ಆ್ಯಶಸ್ ಸರಣಿಯ ಮೊದಲ ಪಂದ್ಯವು ಎರಡೇ ದಿನಗಳಲ್ಲಿ ಕೊನೆಗೊಂಡಿದೆ. ಪರ್ತ್ನ ಆಪ್ಟಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಹೈವೋಲ್ಟೇಜ್ ಟೆಸ್ಟ್ ಸರಣಿಯಲ್ಲಿ ಆಸೀಸ್ 1-0 ಮುನ್ನಡೆ ಸಾಧಿಸಿದೆ.
40 ರನ್‌ಗಳ ಮುನ್ನಡೆಯೊಂದಿಗೆ 2ನೇ ದಿನ ತನ್ನ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಅಗ್ರ ಬ್ಯಾಟರ್‌ಗಳ ವೈಫಲ್ಯದಿಂದಾಗಿ 164 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಆಸೀಸ್‌ಗೆ 205 ರನ್‌ಗಳ ಗುರಿ ನೀಡಿತು. ಇದ
ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಲಯ ತಪ್ಪಿದ್ದ ಆಸೀಸ್ 2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ಗೆ ತಿರುಗೇಟು ನೀಡಿತು. ಆರಂಭಿಕನಾಗಿ ಕಣಕ್ಕಿಳಿದ ಟ್ರಾವಿಸ್ ಹೆಡ್ ಏಕದಿನ ಶೈಲಿಯಲ್ಲಿ ಬ್ಯಾಟಿಂಗ್ ನಡೆಸಿದರು. ಆಂಗ್ಲರ ಬೆವರಿಳಿಸಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಹೆಡ್ 83 ಎಸೆತಗಳಲ್ಲಿ 123 ರನ್ (4 ಸಿಕ್ಸರ್, 16 ಬೌಂಡರಿ) ಚಚ್ಚಿದರು. ಇದರೊಂಗೆ ಮಾರ್ನಸ್ ಲಾಬುಶೇನ್ 51 ರನ್ (49 ಎಸೆತ, 1 ಸಿಕ್ಸರ್, 6 ಬೌಂಡರಿ) ಬಾರಿಸುವ ಮೂಲಕ ಗೆಲುವಿನ ದಡ ಸೇರಿಸಿದರು.
104 ವರ್ಷಗಳ ಬಳಿಕ ಟು ಡೇ ಟೆಸ್ಟ್ ಪಂದ್ಯ!
ಬರೋಬ್ಬರಿ 104 ವರ್ಷಗಳ ಬಳಿಕ ಆ್ಯಶಸ್ ಸರಣಿಯ ಪಂದ್ಯವೊಂದು ಕೇವಲ 2 ದಿನಗಳಲ್ಲಿ ಮುಗಿದಿದೆ. ಅಂದರೆ ಕೊನೆಯ ಬಾರಿ ಉಭಯ ತಂಡಗಳ ಮುಖಾಮುಖಿ 2 ದಿನಗಳಲ್ಲಿ ಅಂತ್ಯಗೊಂಡಿದ್ದು 1921 ರಲ್ಲಿ.

