March 15, 2026
Sunday, March 15, 2026
spot_img

ಇಟಲಿ, ಜಪಾನ್ ನಂತರ ನೆದರ್​​ಲ್ಯಾಂಡ್ ರಾಯಭಾರಿ ಕಚೇರಿಗೆ ಬಾಂಬ್​ ಬೆದರಿಕೆ ಸಂದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನಲ್ಲಿರುವ ವಿದೇಶಿ ರಾಯಭಾರಿ ಕಚೇರಿಗಳಿಗೆ ಬಾಂಬ್‌ ಬೆದರಿಕೆ ಕರೆಗಳು ಬರುತ್ತಿವೆ. ಇಟಲಿ ಹಾಗೂ ಜಪಾನ್‌ ರಾಯಭಾರಿ ಕಚೇರಿಗೆ ಬಾಂಬ್‌ ಬೆದರಿಕೆ ಕರೆ ಬಂದ ಬಳಿಕ ಇದೀಗ ನೆದರ್‌ಲೆಂಡ್‌ ರಾಯಭಾರ ಕಚೇರಿಗೂ ಬೆದರಿಕೆ ಕರೆಬಂದಿದೆ.

ಆರ್‌ಟಿ ನಗರದ, ಗಂಗಾನಗರದಲ್ಲಿರುವ ನೆದರ್‌ಲೆಂಡ್‌ ರಾಯಭಾರ ಕಚೇರಿಗೆ ಬೆದರಿಕೆ ಇಮೇಲ್‌ ಬಂದಿದೆ. 5 RDX ಮತ್ತು ಐಇಡಿ ಬಳಸಿ ಸ್ಫೋಟ ಮಾಡುತ್ತೇವೆ ಎಂದು ಮೇಲ್‌ ಮಾಡಲಾಗಿದೆ.

ಈ ಬಗ್ಗೆ ಆರ್‌.ಟಿ. ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಇಟಲಿ, ಜಪಾನ್ ಹಾಗೂ ನೆದರ್‌ಲ್ಯಾಂಡ್ ಕಚೇರಿಗಳಿಗೆ ಬಂದಿರುವ ಬೆದರಿಕೆ ಸಂದೇಶಗಳ ಮೂಲ ಪತ್ತೆಗೆ ಪೊಲೀಸರು ಇ-ಮೇಲ್ ಐಡಿ ಹಾಗೂ ಕರೆಗಳ ಜಾಡು ಬೆನ್ನತ್ತಿದ್ದು, ರಾಯಭಾರ ಕಚೇರಿಗಳಿಗೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !