ಭಾರತದಲ್ಲಿ ಅನೇಕರು ಬೆಳಗಿನ ಉಪಾಹಾರವಾಗಲಿ, ಸಂಜೆ ಟೀ ಟೈಂ ಆಗಲಿ, ಬಿಸಿ ಚಹಾದೊಂದಿಗೆ ರಸ್ಕ್ ತಿನ್ನುವ ಅಭ್ಯಾಸ ಇರುತ್ತೆ. ರಸ್ಕ್‌ಗಳನ್ನು ತುಂಬಾ ಜನ ಸರಳ ಮತ್ತು ಆರೋಗ್ಯಕರ ತಿಂಡಿ ಎಂದು ಪರಿಗಣಿಸುತ್ತಾರೆ. ಆದರೆ ವೈದ್ಯಕೀಯ ತಜ್ಞರ ಪ್ರಕಾರ, ಮಾರುಕಟ್ಟೆಯಲ್ಲಿ ದೊರೆಯುವ ಸಾಮಾನ್ಯ ರಸ್ಕ್‌ಗಳು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ದೀರ್ಘಕಾಲದಲ್ಲಿ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
ರಸ್ಕ್ ತಯಾರಿಕೆಗೆ ಮುಖ್ಯವಾಗಿ ಮೈದಾ, ಸಕ್ಕರೆ ಮತ್ತು ಕಳಪೆ ಗುಣಮಟ್ಟದ ಎಣ್ಣೆಗಳನ್ನು ಬಳಸಲಾಗುತ್ತದೆ. ಇದರಲ್ಲಿ ಟ್ರಾನ್ಸ್ ಫ್ಯಾಟ್ ಪ್ರಮಾಣ ಹೆಚ್ಚಾಗಿದ್ದು, ಹೃದಯದ ಆರೋಗ್ಯಕ್ಕೆ ಅಪಾಯಕಾರಿ. ಹೆಚ್ಚಿನ ಸಕ್ಕರೆ ಅಂಶವು ತೂಕ ಹೆಚ್ಚಿಸುವುದರೊಂದಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನೂ ಏರಿಸುತ್ತದೆ.

ಹಳಸಿದ ಬ್ರೆಡ್‌ನ ಬಳಕೆ
ಅಂಗಡಿಗಳಲ್ಲಿ ಮಾರಾಟವಾಗುವ ರಸ್ಕ್‌ಗಳನ್ನು ಸಾಮಾನ್ಯವಾಗಿ ಹಳಸಿದ ಬ್ರೆಡ್‌ನಿಂದ ತಯಾರಿಸಲಾಗುತ್ತದೆ. ಇಂತಹ ರಸ್ಕ್‌ಗಳಲ್ಲಿ ಪೌಷ್ಟಿಕಾಂಶ ಕಡಿಮೆ, ಹಾನಿಕಾರಕ ಅಂಶಗಳು ಹೆಚ್ಚು. ಇದು ಚಯಾಪಚಯ ಕ್ರಿಯೆ ಮೇಲೆ ಪರಿಣಾಮ ಬೀರುವುದರೊಂದಿಗೆ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

ಕೊಬ್ಬು ಮತ್ತು ಕೊಲೆಸ್ಟ್ರಾಲ್ ಸಮಸ್ಯೆ
ಟ್ರಾನ್ಸ್ ಫ್ಯಾಟ್ ದೇಹದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಏರಿಸುತ್ತದೆ. ಇದರಿಂದ ಹೃದ್ರೋಗ, ರಕ್ತದೊತ್ತಡ ಮುಂತಾದ ಸಮಸ್ಯೆಗಳು ಎದುರಾಗಬಹುದು. ದಿನನಿತ್ಯವಾಗಿ ರಸ್ಕ್ ಸೇವನೆ ಮಾಡಿದರೆ ದೇಹದ ತೂಕ ನಿಯಂತ್ರಣ ತಪ್ಪಿ, ಮಧುಮೇಹದ ಅಪಾಯ ಹೆಚ್ಚಾಗುತ್ತದೆ.

ಆರೋಗ್ಯಕರ ಪರ್ಯಾಯಗಳು
ತಜ್ಞರ ಸಲಹೆಯ ಪ್ರಕಾರ, ಚಹಾದೊಂದಿಗೆ ರಸ್ಕ್ ಬದಲಿಗೆ ಪೌಷ್ಟಿಕಾಂಶ ಹೆಚ್ಚಿರುವ ತಿಂಡಿಗಳನ್ನು ಸೇವಿಸುವುದು ಉತ್ತಮ. ಹುರಿದ ಮಖಾನ, ಕಡಲೆಕಾಳು, ಅಲ್ಮಂಡ್ಸ್ ಅಥವಾ ನಟ್ಸ್ ನಂತಹ ತಿಂಡಿಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶ ಒದಗಿಸುವುದರೊಂದಿಗೆ ತೂಕ ನಿಯಂತ್ರಣಕ್ಕೂ ಸಹಾಯ ಮಾಡುತ್ತವೆ.