Tuesday, November 18, 2025

ಇನ್ಮುಂದೆ ಕೈಗೆಟಕುವ ದರದಲ್ಲಿ ಸಿಗಲಿದೆ AI ಕಂಪ್ಯೂಟರ್: ಸಿಲಿಕಾನ್ ಸಿಟಿಯಲ್ಲಿ ನಾಳೆ KEO ಲಾಂಚ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಳೆ (ನ.18) ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ಲಾಂಚ್ ಮಾಡ್ತಿದ್ದೇವೆ ಎಂದು ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬೆಂಗಳೂರು ಟೆಕ್ ಸಮ್ಮಿಟ್ 2025, ನಾಳೆಯಿಂದ ಮೂರು ದಿನ ನಡೆಯಲಿದೆ. ದೇಶದಲ್ಲಿ 10%ಗಿಂತ ಕಡಿಮೆ ಮನೆಯಲ್ಲಿ ಕಂಪ್ಯೂಟರ್ ಇದೆ. ಕರ್ನಾಟಕದಲ್ಲಿ 15% ಮನೆಯಲ್ಲಿ ಕಂಪ್ಯೂಟರ್ ಇದೆ. 60% ಭಾರತೀಯ ವಿಧ್ಯಾರ್ಥಿಗಳು ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗ್ತಿದ್ದಾರೆ. ಭಾರತದ ಡಿಜಿಟಲ್ ಎಕಾನಮಿ ಹೆಚ್ಚುತ್ತಿದೆ. ಹೆಚ್ಚು ಜನರಿಗೆ ಕೈಗೆಟಕುವ ದರದಲ್ಲಿ ಕಂಪ್ಯೂಟರ್ ಸಿಗಬೇಕಿದೆ. ಹಾಗಾಗಿ KEO ಕಂಪ್ಯೂಟರ್ ಅನ್ನು ನಾವು ಲಾಂಚ್ ಮಾಡ್ತಿದ್ದೇವೆ. ನಾಳೆ KEOನ ಬೆಲೆಯನ್ನು ನಾವು ಬಹಿರಂಗಪಡಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಸಿದ್ದರಾಮಯ್ಯನವರು ಬೆಂಗಳೂರು ಟೆಕ್ ಸಮ್ಮಿಟ್ ಉದ್ಘಾಟನೆ ಮಾಡಲಿದ್ದಾರೆ. ನಾಳೆ ಲಾಂಚ್ ಆದ್ಮೇಲೆ Keonext.in ವೆಬ್‌ಸೈಟ್‌ನಲ್ಲಿ ಫ್ರೀ ಬುಕಿಂಗ್‌ಗೆ ಅವಕಾಶ ಇರುತ್ತದೆ. ಬುಕಿಂಗ್ ಮಾಡಿದ ಎರಡು ತಿಂಗಳಲ್ಲಿ ವಿತರಣೆ ಮಾಡ್ತೇವೆ ಎಂದಿದ್ದಾರೆ.

KEO AI ಕಂಪ್ಯೂಟರ್ ವಿಶೇಷತೆ ಏನು?
ಕೈಗೆಟಕುವ ದರದಲ್ಲಿ ಕಂಪ್ಯೂಟಿಂಗ್ ಸೌಲಭ್ಯದ ಬುದ್ಧಿವಂತ ಹಾಗೂ ಅಗ್ಗದ ಕಂಪ್ಯೂಟರ್.
KEO ಜ್ಞಾನ ಆಧಾರಿತ (ಕೆ), ಮಿತವ್ಯಯ (ಇ) ಮತ್ತು ಮುಕ್ತ-ಕಂಪ್ಯೂಟಿಂಗ್ (ಓಪನ್ ಸೋರ್ಸ್) ಕೆಇಒ.
ಲಿನಕ್ಸ್ ಆಧಾರಿತ ಆಪರೇಟಿಂಗ್ ಸಿಸ್ಟಮ್ (ಒಎಸ್) ಹೊಂದಿರುವ ಓಪನ್-ಸೋರ್ಸ್ ಆರ್‌ಐಎಸ್‌ಸಿ-ವಿ ಪ್ರೊಸೆಸರ್‌ನಲ್ಲಿ ನಿರ್ಮಿಸಿರುವ `ಕೆಇಒ’.
4ಜಿ, ವೈ-ಫೈ, ಈಥರ್ನೆಟ್, ಯುಎಸ್‌ಬಿ-ಎ ಮತ್ತು ಯುಎಸ್‌ಬಿ-ಸಿ ಪೋರ್ಟ್‌ಗಳು, ಎಚ್‌ಡಿಎಂಐ ಮತ್ತು ಆಡಿಯೊ ಜ್ಯಾಕ್ ಸೌಲಭ್ಯ.
ಕಲಿಕೆ, ಪ್ರೋಗ್ರಾಮಿಂಗ್ ಮತ್ತು ಉತ್ಪಾದಕತೆ ಪರಿಕರಗಳೊಂದಿಗೆ ಸಂಪೂರ್ಣ ಸಜ್ಜಾಗಿದೆ.

error: Content is protected !!