April 4, 2026
Saturday, April 4, 2026
spot_img

ಚುನಾವಣೆ ಗೆಲ್ಲಲು ಕೃತಕ ಬುದ್ಧಿಮತ್ತೆಯ ಮೊರೆ: ಡಿಕೆಶಿ ಕಾರ್ಯತಂತ್ರಕ್ಕೆ ಎಐ ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಸರ್ಕಾರದ ಆಡಳಿತದ ಯಶಸ್ಸು ಈಗ ಕೃತಕ ಬುದ್ಧಿಮತ್ತೆಯ ಗಮನವನ್ನೂ ಸೆಳೆದಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಹೆಮ್ಮೆಯಿಂದ ಹೇಳಿದ್ದಾರೆ.

ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಸ್ಸಾಂ ವಿಧಾನಸಭಾ ಚುನಾವಣೆಯ ಗೆಲುವಿನ ತಂತ್ರಗಾರಿಕೆ ಬಗ್ಗೆ ಎಐ ನೀಡಿದ ವಿಶೇಷ ಸಲಹೆಯನ್ನು ಬಹಿರಂಗಪಡಿಸಿದರು. “ಅಸ್ಸಾಂನಲ್ಲಿ ಗೆಲುವು ಸಾಧಿಸಲು ನೀವು ‘ಕರ್ನಾಟಕ ಮಾಡೆಲ್’ ಚುನಾವಣಾ ತಂತ್ರವನ್ನೇ ಅನುಸರಿಸಿ. ಇಂದು ಇಡೀ ವಿಶ್ವವೇ ಕರ್ನಾಟಕದ ಮಾದರಿಯನ್ನು ಗಮನಿಸುತ್ತಿದೆ” ಎಂದು ಎಐ ಸೂಚಿಸಿದೆ ಎಂದು ಸಚಿವರು ವಿವರಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳು ಮತ್ತು ಆಡಳಿತ ವೈಖರಿ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದಕ್ಕೆ ಈ ಎಐ ನೀಡಿದ ಪ್ರತಿಕ್ರಿಯೆಯೇ ಸಾಕ್ಷಿ ಎಂದು ಅವರು ಬಣ್ಣಿಸಿದರು. ಇದೇ ವೇಳೆ ಸರ್ಕಾರದ ಆಡಳಿತದ ಮೇಲಿನ ಟೀಕೆಗಳಿಗೆ ಉತ್ತರಿಸಿದ ಸಚಿವರು, ಪಕ್ಷದ ದೃಢ ನಿಲುವನ್ನು ಸ್ಪಷ್ಟಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !