Sunday, September 14, 2025

ಮುಂಬೈನಿಂದ ಜೋಧ್‌ಪುರಕ್ಕೆ ಹೊರಟ ಏರ್‌ ಇಂಡಿಯಾ ರನ್‌ವೇಯಲ್ಲೇ ಸ್ಟಾಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈನಿಂದ ಜೋಧ್‌ಪುರಕ್ಕೆ ಹೊರಟ ಏರ್‌ ಇಂಡಿಯಾ ವಿಮಾನ AI645 ಟೇಕಾಫ್‌ ವೇಳೆ ತಾಂತ್ರಿಕ ಸಮಸ್ಯೆ ಕಾಣಿಸಿಗೊಂಡಿದ್ದು, ರನ್‌ವೇಯಲ್ಲೇ ನಿಲ್ಲಿಸಲಾಯಿತು.

ಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ವಿಮಾನವು ಬೆಳಗ್ಗೆ 9:25ಕ್ಕೆ ಟೇಕಾಫ್‌ಗೆ ಸಿದ್ಧವಾಗಿತ್ತು. ಆದ್ರೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತ್ತೆ ಏರ್‌ಪೋರ್ಟ್‌ ಬೇ ಗೆ ವಾಪಸ್‌ ಆಯಿತು.

ಬಳಿಕ ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ ಗೇಟ್‌ಗೆ ಹಿಂತಿರುಗುವಂತೆ ಮಾಡಲಾಯಿತು. ಸ್ವಲ್ಪ ಸಮಯದ ನಂತರ, ಪ್ರಯಾಣಿಕರನ್ನು ಮತ್ತೆ ಹತ್ತಲು ಹೇಳಲಾಯಿತು.

ಅನಿರೀಕ್ಷಿತ ರದ್ದತಿಯಿಂದ ಉಂಟಾದ ಅನಾನುಕೂಲತೆಗಾಗಿ ಏರ್‌ ಇಂಡಿಯಾ ವಕ್ತಾರರು ಹೇಳಿಕೆಯಲ್ಲಿ ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದ್ದಾರೆ.

ಇದನ್ನೂ ಓದಿ