ವಿಮಾನ ಪ್ರಯಾಣ ಅಂದ್ರೆ ಕೇವಲ ಟಿಕೆಟ್ ಬುಕ್ ಮಾಡಿ ಆರಾಮದಲ್ಲಿ ಕುಳಿತುಕೊಳ್ಳುವುದಲ್ಲ. ಕೆಲವು ಸಣ್ಣ–ಸಣ್ಣ ಸುರಕ್ಷತಾ ನಿಯಮಗಳನ್ನು ತಿಳಿದಿದ್ದರೆ ನಿಮಗೆ ಒಳ್ಳೆದು. ಬಹುತೇಕ ಅಪಾಯದ ಸಮಯದಲ್ಲಿ ನಿಮ್ಮ ಪ್ರತಿಕ್ರಿಯೆ ಬಹಳ ಮುಖ್ಯವಾಗುತ್ತದೆ. ಬಹುಮಂದಿ ಕಡೆಗಣಿಸುವ ಈ ವಿಚಾರಗಳೇ ಕೆಲವೊಮ್ಮೆ ಜೀವ ಉಳಿಸಬಹುದು.
ಮೊದಲು ನಿಮ್ಮ ಆಸನದ ಸುತ್ತಮುತ್ತ ಗಮನಿಸಿ. ಎಮರ್ಜೆನ್ಸಿ ಎಕ್ಸಿಟ್ ಎಲ್ಲಿದೆ ಅನ್ನೋದನ್ನ ಮನಸ್ಸಿನಲ್ಲಿ ಇಟ್ಟುಕೊಳ್ಳಿ.
ಲೈಟ್ಸ್ ಆಫ್ ಅದಮೇಲೂ ಎಷ್ಟು ಸಾಲುಗಳಲ್ಲಿ ಹೊರಗೆ ಹೋಗಬಹುದು ಅನ್ನೋದನ್ನ ಯೋಚಿಸಿಟ್ಟುಕೊಳ್ಳಿ ಸಹಾಯವಾಗುತ್ತದೆ.
ಸೀಟ್ ಬೆಲ್ಟ್ ಅನ್ನು ಸರಿಯಾಗಿ ಕಟ್ಟಿಕೊಳ್ಳುವುದು ಟೇಕಾಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಅತ್ಯಂತ ಮುಖ್ಯ.
ಆಕ್ಸಿಜನ್ ಮಾಸ್ಕ್ ಬಿದ್ದಾಗ ಮೊದಲು ನಿಮ್ಮದು ಹಾಕಿಕೊಳ್ಳಿ, ನಂತರ ಮಕ್ಕಳಿಗೆ ಸಹಾಯ ಮಾಡಿ. ಇದು ಸ್ವಾರ್ಥವಲ್ಲ, ಸುರಕ್ಷತೆ.
ಸುರಕ್ಷತಾ ಸೂಚನೆಗಳನ್ನು ವಿಮಾನ ಸಿಬ್ಬಂದಿ ಹೇಳುವಾಗ ಗಮನ ಕೊಡೋದನ್ನ ಅನೇಕರು ಲಘುವಾಗಿ ತೆಗೆದುಕೊಳ್ಳುತ್ತಾರೆ, ಆದರೆ ಪ್ರತಿಯೊಂದು ವಿಮಾನದಲ್ಲೂ ನಿಯಮಗಳು ಸ್ವಲ್ಪ ಬದಲಾಗಿರಬಹುದು.
ಹ್ಯಾಂಡ್ ಬ್ಯಾಗ್‌ನಲ್ಲಿ ಅಗತ್ಯ ವಸ್ತುಗಳನ್ನು ಮಾತ್ರ ಇಟ್ಟುಕೊಳ್ಳಿ. ಅಪಾಯದ ಸಮಯದಲ್ಲಿ ಬ್ಯಾಗ್ ತೆಗೆದುಕೊಳ್ಳೋ ಯತ್ನ ಮಾಡಬೇಡಿ.
ಶೂಸ್ ಹಾಕಿಕೊಂಡೇ ಪ್ರಯಾಣಿಸುವುದು ಉತ್ತಮ, ಏಕೆಂದರೆ ತುರ್ತು ಸಂದರ್ಭದಲ್ಲಿ ಓಡಾಡಲು ಸಹಾಯವಾಗುತ್ತದೆ.



