Friday, December 12, 2025

ಮ್ಯಾನ್ಮಾರ್ ಆಸ್ಪತ್ರೆಯ ಮೇಲೆ ವೈಮಾನಿಕ ದಾಳಿ: 34 ಜನ ಸಾವು, 80 ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮ್ಯಾನ್ಮಾರ್ ಆಸ್ಪತ್ರೆಯ ಮೇಲೆ ವೈಮಾನಿಕ ದಾಳಿ ನಡೆದಿದೆ. ಈ ದುರಂತದಲ್ಲಿ ನಾಗರಿಕರು ಮತ್ತು ಆರೋಗ್ಯ ಕಾರ್ಯಕರ್ತರು ಸೇರಿದಂತೆ 34 ಮಂದಿ ಸಾವನ್ನಪ್ಪಿದ್ದಾರೆ.

ಪಶ್ಚಿಮ ರಾಜ್ಯವಾದ ರಾಖೈನ್‌ನಲ್ಲಿರುವ ಜನಾಂಗೀಯ ಅರಕನ್ ಸೈನ್ಯದ ನಿಯಂತ್ರಣದಲ್ಲಿರುವ ಪ್ರದೇಶವಾದ ಮ್ರೌಕ್-ಯು ಪಟ್ಟಣದಲ್ಲಿರುವ ಜನರಲ್ ಆಸ್ಪತ್ರೆಯ ಮೇಲೆ ಬುಧವಾರ ರಾತ್ರಿ ನಡೆದ ದಾಳಿಯಲ್ಲಿ ಸುಮಾರು 80 ಜನರು ಗಾಯಗೊಂಡಿದ್ದಾರೆ. ಮ್ಯಾನ್ಮಾರ್​​​ನ ರಾಖೈನ್ ರಾಜ್ಯದ ಮ್ರೌಕ್-ಯು ಟೌನ್‌ಶಿಪ್‌ನಲ್ಲಿರುವ ಸಾರ್ವಜನಿಕ ಆಸ್ಪತ್ರೆಯ ಮೇಲೆ ಮ್ಯಾನ್ಮಾರ್‌ನ ಮಿಲಿಟರಿ ಜುಂಟಾ ನಡೆಸಿದ ಮಾರಕ ವೈಮಾನಿಕ ದಾಳಿಯಲ್ಲಿ 34 ಜನರು ಸಾವನ್ನಪ್ಪಿದ್ದಾರೆ.

ಮ್ಯಾನ್ಮಾರ್ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ಪ್ರಮುಖ ಬಂಡುಕೋರ ಸಶಸ್ತ್ರ ಪಡೆ ನಿಯಂತ್ರಣವಿರುವ ಪ್ರದೇಶದಲ್ಲಿ ಆಸ್ಪತ್ರೆ ನಾಶವಾಗಿದೆ. ಇದರಲ್ಲಿ 34 ರೋಗಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ರಾಖೈನ್‌ನಲ್ಲಿನ ರಕ್ಷಣಾ ಸೇವೆಗಳ ಹಿರಿಯ ಅಧಿಕಾರಿ ವೈ ಹುನ್ ಆಂಗ್, ಫೈಟರ್ ಜೆಟ್ ರಾತ್ರಿ 9.13ಕ್ಕೆ ಎರಡು ಬಾಂಬ್‌ಗಳನ್ನು ಎಸೆಯಿತು ಎಂದಿದ್ದಾರೆ.

error: Content is protected !!