February 17, 2026
Tuesday, February 17, 2026
spot_img

ವಿಮಾನ ಪತನದಲ್ಲಿ ಅಜಿತ್​ ಪವಾರ್ ಸಾ*ವು: ದತ್ತಾಂಶ ಮರುಪಡೆಯಲು ಮುಂದಾದ AAIB!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರ ಡಿಸಿಎಂ ಅಜಿತ್​ ಪವಾರ್​ ಸಾವಿಗೆ ಕಾರಣವಾಗಿದ್ದ ಬಾರಾಮತಿ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನಿಖೆ ನಡೆಸುತ್ತಿದೆ. ಪತನಗೊಂಡ ವಿಮಾನ ಲಯರ್​ಜೆಟ್​​ 45ನ ಕಾಕ್​ಪಿಟ್​ ವಾಯ್ಸ್​ ರೆಕಾರ್ಡರ್​​ (ಸಿವಿಆರ್​)ನ ದತ್ತಾಂಶ ಮರುಪಡೆಯಲು ವಿದೇಶಿ ತಂತ್ರಜ್ಞರ ವಿಶೇಷ ಬೆಂಬಲವನ್ನು ಕೋರಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಎಎಐಬಿ, ವಿಮಾನ ಅಪಘಾತದ ತನಿಖಾ (ಅಪಘಾತಗಳು ಮತ್ತು ಘಟನೆಗಳ ತನಿಖೆ) ನಿಯಮಗಳು, 2017 ಮತ್ತು ಐಸಿಎಒ ಅನುಬಂಧ 13ರ ಅಡಿ ನಿಗದಿಪಡಿಸಲಾದ ಅಂತಾರಾಷ್ಟ್ರೀಯ ಮಾನದಂಡಗಳನ್ನು ಸಂಪೂರ್ಣವಾಗಿ ಅನುಸರಿಸಲಾಗಿದೆ ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪತನಗೊಂಡ ವಿಮಾನ ಎರಡು ಸ್ವಾತಂತ್ರ್ಯ ಫ್ಲೈಟ್​ ರೆಕಾರ್ಡರ್​ ಹೊಂದಿದೆ. ಎರಡು ರೆಕಾರ್ಡ್​​ಗಳು ದುರಂತದಲ್ಲಿ ದೀರ್ಘಕಾಲ ಬೆಂಕಿ ಕಾಣಿಸಿಕೊಂಡಿದ್ದರಿಂದ ತೀವ್ರವಾದ ಹಾನಿಗೆ ಒಳಗಾಗಿವೆ. AAIB ಪ್ರಕಾರ L3-ಕಮ್ಯುನಿಕೇಷನ್ಸ್ ತಯಾರಿಸಿದ ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ (DFDR) ಅನ್ನು ಅದರ ಫ್ಲೈಟ್ ರೆಕಾರ್ಡರ್ ಪ್ರಯೋಗಾಲಯದಲ್ಲಿ ಯಶಸ್ವಿಯಾಗಿ ಡೌನ್‌ಲೋಡ್ ಮಾಡಲಾಗಿದೆ.

ಹನಿವೆಲ್ ತಯಾರಿಸಿದ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ವಿವರವಾದ ತಾಂತ್ರಿಕ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ದತ್ತಾಂಶ ಮರುಪಡೆಯುವಿಕೆಯಲ್ಲಿ ವಿಶೇಷ ಬೆಂಬಲಕ್ಕಾಗಿ ಉತ್ಪಾದನಾ ಮಾನ್ಯತೆ ಪಡೆದ ಸಂಸ್ಥೆಯ ಪ್ರತಿನಿಧಿಯಿಂದ ಸಹಾಯ ಕೇಳಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಕಳೆದ ವಾರ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ.ರಾಮ್​ಮೋಹನ್​ ನಾಯ್ಡು ತನಿಖೆ ಕುರಿತು ಮಾತನಾಡಿ, ಪತನಗೊಂಡ ಲಿಯರ್ಜೆಟ್​ ವಿಮಾನದ ಪ್ರಾಥಮಿಕ ಮಾಹಿತಿಯನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ತಿಳಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !