ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರ ಸಾವಿನ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಳವಳ ವ್ಯಕ್ತಪಡಿಸಿದ್ದಾರೆ. ಉನ್ನತಮಟ್ಟದ ತನಿಖೆಗೆ ವಹಿಸುವಂತೆ ಆಗ್ರಹಿಸಿದ್ದಾರೆ.
ಅಜಿತ್ ಪವಾರ್ ಎನ್‌ಡಿಎ ತೊರೆದು INDIA ಒಕ್ಕೂಟ ಸೇರಬೇಕಿತ್ತು. ಅವರು ಎನ್‌ಡಿಎ ಒಕ್ಕೂಟ ತೊರೆಯುವ ಮಾತುಗಳು ದಟ್ಟವಾಗಿತ್ತು.ಈ ವೇಳೆ ಏನು ಆಗಿದೆ ನೋಡಿ. ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಉನ್ನತಮಟ್ಟದ ತನಿಖೆ ನಡೆಯಬೇಕೆಂದು ನಾನು ಒತ್ತಾಯಿಸುತ್ತೇನೆ. ಅಪಘಾತ ಹೇಗೆ ಸಂಭವಿಸಿತು ಅನ್ನೋದು ಗೊತ್ತಾಗಬೇಕು ಎಂದು ಹೇಳಿದ್ದಾರೆ.
ಆಪ್ ನಾಯಕಿ ಸೋಮನಾಥ್ ಭಾರ್ತಿ ಕೂಡ, ಪವಾರ್ ಅವರ ಸಾವು ಅಪಘಾತವೇ ಅಥವಾ ವಿಧ್ವಂಸಕ ಕೃತ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ.



