ಹೊಸದಿಗಂತ ವರದಿ ಯಾದಗಿರಿ:
ಚಿಕ್ಕಮ್ಮನ ಮೇಲೆ ಸಹೋದರರಿಬ್ಬರು ನಿರಂತರವಾಗಿ ಅತ್ಯಾಚಾರ ನಡೆಸಿದ ಆರೋಪ ಕೇಳಿಬಂದಿದ್ದು, ಸಂತ್ರಸ್ಥ ಮಹಿಳೆಯೊಬ್ಬರು ತನಗೆ ಆತ್ಮ ರಕ್ಷಣೆ ನೀಡುವಂತೆ ಇಲ್ಲಿನ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಬುಧವಾರ ನಡೆದಿದೆ.
ಗುರಮಠಕಲ್ ತಾಲೂಕಿನ ಗ್ರಾಮವೊಂದರ ಮಹಿಳೆಯ ಮೇಲೆ ಇಬ್ಬರು ಸಹೋದರರು7 ವರ್ಷದಿಂದ ನಿರಂತರವಾಗಿ ಅತ್ಯಾಚಾರ ನಡೆಸಿದ್ದು, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಮಹಿಳೆ ಪೋಲಿಸರ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಯಾದಗಿರಿ ಟ್ರಾಫಿಕ್ ಠಾಣೆಯ ಪಿಸಿ ರಮೇಶ, ಜೆಸ್ಕಾಂ ನೌಕರ ಲಕ್ಷ್ಮಣನಿಂದ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿರುವ ಮಹಿಳೆ ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಯಾದಗಿರಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.