ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ದಸರಾ ವೇಳೆ ಓಡಾಡಿ ಫೇಮಸ್ ಆಗಿದ್ದ ಡಬಲ್ ಡೆಕ್ಕರ್ ಬಸ್‌ಗಳು ಇದೀಗ ಬೆಂಗಳೂರಿಗೆ ಬಂದಿಳಿದಿವೆ.ರಾಜಧಾನಿಯಲ್ಲಿ ಇಂದಿನಿಂದ ಲಂಡನ್ ಮಾದರಿಯ ಅಂಬಾರಿ ಡಬಲ್ ಡೆಕ್ಕರ್ ಬಸ್ ಸೇವೆ ಪ್ರವಾಸಿಗರಿಗೆ ಲಭ್ಯವಾಗಲಿದೆ.
ಡಬಲ್ ಡೆಕ್ಕರ್ ಬಸ್ ಸೇವೆಗೆ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಚಾಲನೆ ನೀಡಿದ್ದಾರೆ. ಹಸಿರು ನಿಶಾನೆ ತೋರಿಸುವ ಮೂಲಕ 3 ಬಸ್ ಗಳಿಗೆ ಸಚಿವ ಎಚ್.ಕೆ.ಪಾಟೀಲ್ ಚಾಲನೆ ನೀಡಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಮುಂಭಾಗದಲ್ಲಿ ನೂತನವಾಗಿ 3 ಡಬ್ಬಲ್ ಡೆಕ್ಕರ್ ಬಸ್‌ಗೆ ಚಾಲನೆ ನೀಡಲಾಗಿದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಒಟ್ಟು 3 ಡಬಲ್ ಡೆಕ್ಕರ್ ಬಸ್ ಸೇವೆಯನ್ನು ಪ್ರವಾಸಿಗರಿಗಾಗಿ ನೀಡಲಾಗುತ್ತಿದೆ. ಮೈಸೂರು ದಸರಾ ವೇಳೆ ಡಬಲ್ ಡೆಕ್ಕರ್ ಬಸ್ ಗಳು ಜನಪ್ರಿಯವಾಗಿದ್ದವು. ಇದೀಗ ಬೆಂಗಳೂರಿಗೆ ಬರುವ ಪ್ರವಾಸಿಗರಿಗೆ ಸೇವೆ ನೀಡಲು 3 ಡಬಲ್ ಡೆಕ್ಕರ್ ಬಸ್ ಗಳು ಸಜ್ಜಾಗಿವೆ. ಬೆಂಗಳೂರಿನ ಪ್ರವಾಸೋದ್ಯಮವನ್ನು ಜನಪ್ರಿಯಗೊಳಿಸಲು ಡಬಲ್ ಡೆಕ್ಕರ್ ಬಸ್ ಸೇವೆ ಶುರು ಮಾಡಲಾಗಿದೆ.
ಬಸ್ ಗಳ ಉದ್ಘಾಟನೆಗೂ ಮುನ್ನ ಬಸ್ ವ್ಯವಸ್ಥೆಯನ್ನ ಸಚಿವ ಹೆಚ್ ಕೆ ಪಾಟೀಲ್ ಪರಿಶೀಲಿಸಿದ್ದಾರೆ. ಪ್ರವಾಸಿಗರಂತೆ ಬಸ್ ಮೇಲೆ ನಿಂತು ಹೊರ ನೋಟವನ್ನು ಸಚಿವ ಎಚ್ ಕೆ ಪಾಟೀಲ್ ಕಣ್ಣು ತುಂಬಿಕೊಂಡಿದ್ದಾರೆ. ಪ್ರವಾಸಿಗರ ಹಬ್ ಆಗಿರುವ ಸ್ಥಳಗಳಲ್ಲಿ ಡಬಲ್ ಡೆಕ್ಕರ್ ಬಸ್ ಡಿಮ್ಯಾಂಡ್ ಬಂದ್ರೆ ಅಲ್ಲಿಯೂ ಬಸ್ ಸೇವೆ ನೀಡುವ ಚಿಂತನೆ ಇದೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.


