ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ದ್ವಿಪಕ್ಷೀಯ ಮಾತುಕತೆ ನಡುವೆ B-2 bomber ಪ್ರಹಸನ ಇದೀಗ ಜಗತ್ತಿನಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
ಉಕ್ರೇನ್-ರಷ್ಯಾ ಸಂಘರ್ಷಕ್ಕೆ ಅಂತ್ಯ ಹಾಡಿ, ಶಾಂತಿ ಸ್ಥಾಪಿಸುವ ಉದ್ದೇಶದಿಂದ ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಅಮೆರಿಕದ ಅಲಾಸ್ಕಾದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಯಿತು.
ಮಾತುಕತೆ ಸಂಬಂಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ನಿಯೋಗದೊಂದಿಗೆ ಅಲಸ್ಕಾದ ವಿಶೇಷ ವಾಯುನೆಲೆಯಲ್ಲಿ ಬಂದಿಳಿದರು. ಈ ವೇಳೆ ಸ್ವತಃ ಡೊನಾಲ್ಡ್ ಟ್ರಂಪ್ ವ್ಲಾಡಿಮಿರ್ ಪುಟಿನ್ ರನ್ನು ಸ್ವಾಗತಿಸಿ ವೇದಿಕೆಯತ್ತ ಕರೆತಂದರು. ಇದೇ ಸಂದರ್ಭ ಉಭಯ ನಾಯಕರ ತಲೆ ಮೇಲೆ ಅಮೆರಿಕ ಸೇನೆಯ ವಿಧ್ವಂಸಕ ಬಾಂಬರ್ ಫೈಟರ್ ಜೆಟ್ B-2 bomber ಹಾರಾಡಿದ್ದು, ಅದಕ್ಕೆಅಮೆರಿಕದ F-22 ರಾಪ್ಟರ್ ಫೈಟರ್ ಜೆಟ್ ಗಳು ಸಾಥ್ ನೀಡಿದವು. ಇದು ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
https://x.com/Geiger_Capital/status/1956435809189478527?ref_src=twsrc%5Etfw%7Ctwcamp%5Etweetembed%7Ctwterm%5E1956435809189478527%7Ctwgr%5Ebb612b790ae5f3d5b4887e7a35eb146af70c96a0%7Ctwcon%5Es1_&ref_url=https%3A%2F%2Fwww.deccanherald.com%2Fworld%2Fwatch-b-2-bomber-fighter-jets-thunder-overhead-as-trump-and-putin-walk-at-alaskas-military-base-3683648
ಆಕಾಶದಲ್ಲಿ ಯುದ್ಧ ವಿಮಾನಗಳ ಶಬ್ದ ಕೇಳಿಸಿತು. ಶಬ್ದ ಕೇಳಿ ಇಬ್ಬರೂ ನಿಂತರು. ಈ ವೇಳೆ ಪುಟಿನ್ ತಲೆ ಎತ್ತಿ ಆಕಾಶ ನೋಡಿದರು, ನಂತರ ಇಬ್ಬರೂ ಮುಂದೆ ಹೋದರು.
ಇನ್ನು ರಷ್ಯಾ ಅಧ್ಯಕ್ಷರ ಆಗಮನದ ವೇಳೆ ಯುದ್ಧ ವಿಮಾನಗಳು ಹಾರಾಡಿರುವ ಕುರಿತು ಮಾಹಿತಿ ನೀಡಿರುವ ಅಮೆರಿಕ ಇದು ಅತಿಥಿಗಳಿಗೆ ಅಮೆರಿಕದ ಸೇನಾ ಗೌರವ ಎಂದು ಹೇಳಿಕೊಂಡಿದೆ.
ಅದಾಗ್ಯೂ ಅಮೆರಿಕದ ಈ ನಡೆ ಜಗತ್ತಿನಾದ್ಯಂತ ವ್ಯಾಪಕ ಪರ-ವಿರೋಧ ಟೀಕೆಗಳಿಗೆ ಕಾರಣವಾಗಿದೆ. ಅಮೆರಿಕದ ಈ ನಡೆಯನ್ನು ಟೀಕಿಸಿರುವ ನೆಟ್ಟಿಗರು ಸದಾಕಾಲ ಆತಂಕದಲ್ಲೇ ಸಮಯ ಕಳೆಯುವ ಅಮೆರಿಕ ಪುಟಿನ್ ಭೇಟಿ ಸಂದರ್ಭದಲ್ಲೂ ತನ್ನ ಭಯವನ್ನು ಜಗಜ್ಜಾಹಿರು ಮಾಡಿದೆ.