March 22, 2026
Sunday, March 22, 2026
spot_img

ಅತ್ತ ಅಮೆರಿಕದ H-1B ವೀಸಾ‌ ಶುಲ್ಕ ಹೆಚ್ಚಳ: ಇತ್ತ ಭಾರತೀಯರಿಗೆ ರೆಡ್ ಕಾರ್ಪೆಟ್ ಹಾಕಲು ಮುಂದಾದ ಜರ್ಮನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ H-1B ವೀಸಾ‌ ಶುಲ್ಕ ಹೆಚ್ಚಳದಿಂದ ಕಂಗೆಟ್ಟಿರುವ ಭಾರತೀಯರಿಗೆ ಜರ್ಮನಿ ಬಿಗ್‌ ಆಫರ್‌ ನೀಡಿದೆ. ವೃತ್ತಿಪರ ಪರಿಣತ ಭಾರತೀಯರಿಗೆ ಜರ್ಮನಿಗೆ ಬರಬಹುದು ಎಂದು ರಾಯಭಾರಿ ಸ್ವಾಗತ ಕೋರಿದ್ದಾರೆ.

ಎಲ್ಲಾ ಹೆಚ್ಚು ಕೌಶಲ್ಯಪೂರ್ಣ ಭಾರತೀಯರಿಗೆ ನನ್ನ ಕರೆ, ಜರ್ಮನಿ ತನ್ನ ಸ್ಥಿರ ವಲಸೆ ನೀತಿಗಳೊಂದಿಗೆ ಮತ್ತು ಐಟಿ, ನಿರ್ವಹಣೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರಿಗೆ ಉತ್ತಮ ಉದ್ಯೋಗಾವಕಾಶ ಕಲ್ಪಿಸುತ್ತದೆ ಎಂದು ಜರ್ಮನಿ ರಾಯಭಾರಿ ಫಿಲಿಪ್ ಅಕೆರ್ಮನ್ ಹೇಳಿದ್ದಾರೆ.

ವೀಡಿಯೋ ಕೂಡ ಹಂಚಿಕೊಂಡಿರುವ ಅಕೆರ್ಮನ್‌, ಜರ್ಮನಿಯಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ಗುಂಪಿನಲ್ಲಿ ಭಾರತೀಯರು ಸೇರಿದ್ದಾರೆ. ಜರ್ಮನಿಯಲ್ಲಿ ಕೆಲಸ ಮಾಡುವ ಭಾರತೀಯರು, ಸ್ಥಳೀಯ ಜರ್ಮನಿಯರಿಗಿಂತ ಹೆಚ್ಚು ಸಂಪಾದಿಸುತ್ತಾರೆ. ಏಕೆಂದರೆ, ಭಾರತೀಯರು ನಮ್ಮ ಸಮಾಜ ಮತ್ತು ನಮ್ಮ ಕಲ್ಯಾಣಕ್ಕೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ, ಅವರಿಗೆ ಹೆಚ್ಚಿನ ಸಂಬಳ. ನಾವು ಕಠಿಣ ಪರಿಶ್ರಮದ ಜನರಿಗೆ ಉತ್ತಮ ಉದ್ಯೋಗಗಳನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !