Tuesday, November 11, 2025

ಕೆಂಪು ಕೋಟೆ ಬಳಿ 3 ಗಂಟೆಗಳ ಕಾಲ ನಿಂತಿತ್ತು i20 ಕಾರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೆಂಪು ಕೋಟೆ ಬಳಿ ಸೋಮವಾರ ಸಂಜೆ ನಡೆದ ಕಾರು ಸ್ಫೋಟ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಸ್ಫೋಟಗೊಂಡ ಜಾಗದಲ್ಲಿದ ಸಿಸಿಟಿವಿ ಫೂಟೇಜ್‌ ಲಭ್ಯವಾಗಿದ್ದು, ಸ್ಫೋಟಗೊಂಡ ಹುಂಡೈ ಐ20 ಕಾರು ಕೆಂಪು ಕೋಟೆ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಸುಮಾರು 3 ಗಂಟೆಗಳ ಕಾಲ ನಿಂತಲ್ಲೇ ನಿಂತಿತ್ತು ಎನ್ನುವ ವಿಚಾರ ಬಯಲಾಗಿದೆ.

ದೆಹಲಿಯಲ್ಲಿ ಸ್ಫೋಟಗೊಂಡ ಕಾರು ಮಧ್ಯಾಹ್ನ 3:19ಕ್ಕೆ ಕೆಂಪು ಕೋಟೆ ಪಾರ್ಕಿಂಗ್ ಸ್ಥಳವನ್ನ ಪ್ರವೇಶಿಸಿದೆ. 3 ಗಂಟೆಗಳ ಕಾಲ ಅದೇ ಪಾರ್ಕಿಂಗ್ ಸ್ಥಳದಲ್ಲಿ ನಿಂತಿದ್ದ ಕಾರು, ಸಂಜೆ 6:48ಕ್ಕೆ ಅಲ್ಲಿಂದ ಹೊರಟಿರೋರು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಕಾರು ಸಬ್ಜಿ ಮಂಡಿ ಮತ್ತು ದರಿಯಾಗಂಜ್ ರಸ್ತೆಯ ಮೂಲಕ ತೆರಳಿ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1 ಅನ್ನು ತಲುಪಿದ್ದು, ಕೆಲ ನಿಮಿಷಗಳಲ್ಲೇ ಸ್ಪೋಟ ಸಂಭವಿಸಿದೆ ಎಂದು ಹೇಳಲಾಗ್ತಿದೆ.

ಒಂದು ಚಿತ್ರದಲ್ಲಿ ಕಾರು ಚಾಲಕನ ಕೈ ಕಿಟಕಿಯ ಮೇಲೆ ಇರಿಸಿ ಪಾರ್ಕಿಂಗ್ ಸ್ಥಳಕ್ಕೆ ಪ್ರವೇಶಿಸುತ್ತಿರುವುದನ್ನು ಕಾಣಬಹುದು. ಇನ್ನೊಂದು ಚಿತ್ರದಲ್ಲಿ ಕಾರಿನ ಚಾಲಕನನ್ನು ಕಾಣಬಹುದು, ಅದರಲ್ಲಿ ಅವನು ನೀಲಿ ಮತ್ತು ಕಪ್ಪು ಟೀ ಶರ್ಟ್ ಧರಿಸಿರುವಂತೆ ಕಾಣುತ್ತಾನೆ. ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟದಲ್ಲಿ ಭಯೋತ್ಪಾದಕರ ಸಂಪರ್ಕವಿದೆ ಎಂದು ವಿಧಿವಿಜ್ಞಾನ ಸಾಕ್ಷ್ಯಗಳು ಮತ್ತು ಗುಪ್ತಚರ ಮಾಹಿತಿಗಳು ಸೂಚಿಸಿದ ನಂತರ ದೆಹಲಿ ಪೊಲೀಸರು ಯುಎಪಿಎ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿ 20 ಮಂದಿ ಗಾಯಗೊಂಡಿದ್ದಾರೆ.

error: Content is protected !!