January18, 2026
Sunday, January 18, 2026
spot_img

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಿಗೆ ಒಲಿದ ಮಹತ್ವದ ಜವಾಬ್ದಾರಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಿಸಿಸಿಐ (BCCI) ವಾರ್ಷಿಕ ಮಹಾಸಭೆಯಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಪ್ರಗ್ಯಾನ್ ಓಜಾ ಮತ್ತು ಆರ್‌ಪಿ ಸಿಂಗ್ ಅವರನ್ನು ಹೊಸ ಆಯ್ಕೆದಾರರನ್ನಾಗಿ ಆಯ್ಕೆ ಮಾಡಲಾಗಿದೆ.

ಭಾರತದ ಪರ 24 ಟೆಸ್ಟ್, 18 ಏಕದಿನ ಮತ್ತು 6 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಆರ್‌ಪಿ ಸಿಂಗ್, ಪೂರ್ವ ವಲಯದಿಂದ ಆಯ್ಕೆದಾರರಾಗಿದ್ದಾರೆ. ಇನ್ನು ಆರ್‌ಪಿ ಸಿಂಗ್ ಭಾರತ ಪರ 14 ಟೆಸ್ಟ್ ಪಂದ್ಯಗಳಲ್ಲಿ 40 ವಿಕೆಟ್‌ಗಳನ್ನು ಕಬಳಿಸಿದ್ದು, 58 ಏಕದಿನ ಪಂದ್ಯಗಳಲ್ಲಿ 69 ವಿಕೆಟ್‌ಗಳನ್ನು ಮತ್ತು 10 ಟಿ20ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆರ್‌ಪಿ ಸಿಂಗ್ ದೀರ್ಘಕಾಲದವರೆಗೆ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದು, 94 ಪ್ರಥಮ ದರ್ಜೆ ಪಂದ್ಯಗಳಲ್ಲಿ 301 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಪ್ರಗ್ಯಾನ್ ಓಜಾ ವೃತ್ತಿಜೀವನ
ಸಚಿನ್ ತೆಂಡೂಲ್ಕರ್ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯದ ನಂತರ ಅವರ ವೃತ್ತಿಜೀವನವೂ ಕೊನೆಗೊಂಡಿತು. ಆ ಪಂದ್ಯದಲ್ಲಿ ಅವರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಗೂ ಆಯ್ಕೆ ಮಾಡಲಾಗಿತ್ತು. ಓಜಾ 108 ಪ್ರಥಮ ದರ್ಜೆ ಪಂದ್ಯಗಳಲ್ಲಿ ಅನುಭವ ಹೊಂದಿದ್ದು, 424 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೆಯೇ ಟಿ20ಯಲ್ಲಿ 156 ವಿಕೆಟ್‌ಗಳನ್ನು ಪಡೆದಿದ್ದಾರೆ.

Must Read

error: Content is protected !!