Wednesday, November 26, 2025

ಯಾದಗಿರಿಯಲ್ಲಿ ನಡೆಯಿತು ಆಕರ್ಷಕ ಆರ್ ಎಸ್ ಎಸ್ ಪಥಸಂಚಲನ

ಹೊಸದಿಗಂತ ವರದಿ, ಯಾದಗಿರಿ:

ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಲ್ಲಿ ಮಂಗಳವಾರ ಆರ್ ಎಸ್ ಎಸ್ ಪಥ ಸಂಚಲನ ಭವ್ಯವಾಗಿ ನಡೆಯಿತು.

ನಿರೀಕ್ಷೆಗೂ ಮೀರಿ ಗಣವೇಷಧಾರಿಗಳು ಶಿಸ್ತು ಬದ್ಧವಾಗಿ ಹೆಜ್ಜೆ ಹಾಕಿದರು. ಮಧ್ಯಾಹ್ನ 3.30ಕ್ಕೆ ಇಲ್ಲಿನ ಪುರಸಬೆ ಆವರಣದಿಂದ ಪಥಸಂಚಲನ ಪ್ರಾರಂಭವಾಗಿ ಮುಖ್ಯ ಬಜಾರ, ಹನುಮಾನ ವೃತ್ತ, ಬಸವೇಶ್ವರ ವೃತ್ತ, ಹಳೆ ಬಸ್ ನಿಲ್ದಾಣ, ರೇವಣಸಿದ್ಧೇಶ್ವರ ದೇವಸ್ಥಾನ, ಮ್ಯಾಗೇರಿ ಓಣಿ, ಶ್ರೀರಾಮ ಚೌಕ್, ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ, ಅಂಬಿಗರ ಚೌಡಯ್ಯ ವೃತ್ತ, ಟಿಪ್ಪು ಸುಲ್ತಾನ (ಮಲಘಾಣ) ಚೌಕ್, ಕಾಳಿಕಾ ದೇವಿ ದೇವಸ್ಥಾನ, ಸೊನ್ನದ ಬಡಾವಣೆ, ಹನುಮಾನ ವೃತ್ತ, ತೋಟದಪ್ಪ ದೇವಸ್ಥಾನ, ಝೇಂಡಾ ಕಟ್ಟಾ, ಗೌಡರ ಓಣಿ ಮೂಲಕ ಪುನಃ ಪುರಸಭೆ ಆವರಣ ತಲುಪಿ ಅಲ್ಲಿ ಬೌದ್ಧಿಕ್ ನಡೆಯಿತು.

ಪಟ್ಟಣದ ಎಲ್ಲ ಪ್ರಮುಖ ಬೀದಿಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದು ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಪಡೆ ನಿಯೋಜನೆ ಮಾಡಲಾಗಿತ್ತು.

error: Content is protected !!