ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಸ್ಟಾರ್ ನಟಿ ತ್ರಿಷಾಗೆ ಈಗ 42 ವರ್ಷ. ಇನ್ನೂ ಸಿಂಗಲ್ ಆಗಿಯೇ ಇದ್ದಾರೆ. ಅವರ ವೃತ್ತಿಜೀವನದಲ್ಲಿ ಹಲವು ಲವ್ ಅಫೇರ್, ಡೇಟಿಂಗ್ ವದಂತಿಗಳು ಬಂದಿವೆ. ನಿಶ್ಚಿತಾರ್ಥ ಮಾಡಿಕೊಂಡು ಬ್ರೇಕಪ್ ಮಾಡಿಕೊಂಡಿದ್ದು ಆಗ ದೊಡ್ಡ ಸಂಚಲನ ಸೃಷ್ಟಿಸಿತ್ತು.
2015ರಲ್ಲಿ ಉದ್ಯಮಿ ವರುಣ್ ಮಣಿಯನ್ ಜೊತೆ ತ್ರಿಷಾ ನಿಶ್ಚಿತಾರ್ಥವಾಗಿತ್ತು. ಆದರೆ ಭಿನ್ನಾಭಿಪ್ರಾಯಗಳಿಂದ ಬ್ರೇಕಪ್ ಮಾಡಿಕೊಂಡರು. ಆದ್ರೆ ಇದೀಗ ತ್ರಿಷಾ ಬ್ರೇಕಪ್ ಮಾಡಿಕೊಂಡ ವರುಣ್ ಜೊತೆ ಇನ್ನೊಬ್ಬ ನಟಿ ಅಫೇರ್ ಇಟ್ಟುಕೊಂಡಿದ್ದರು.
ವರುಣ್ ಜೊತೆ ಡೇಟಿಂಗ್ ಮಾಡಿದ ನಟಿ ಬೇರಾರೂ ಅಲ್ಲ, ಬಿಂದು ಮಾಧವಿ. ಅವರು ಬಿಗ್ ಬಾಸ್ ತೆಲುಗು OTT ವಿಜೇತೆ. ಬಿಂದು ಮಾಧವಿ ‘ರಾಮರಾಮ ಕೃಷ್ಣ ಕೃಷ್ಣ’, ‘ಪಿಲ್ಲ ಜಮೀನ್ದಾರ್’ ಚಿತ್ರಗಳಲ್ಲಿ ನಟಿಸಿದ್ದಾರೆ.

ಸಂದರ್ಶನವೊಂದರಲ್ಲಿ, ತ್ರಿಷಾ ಬ್ರೇಕಪ್ ಮಾಡಿಕೊಂಡ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡಿದ್ದೀರಾ ಎಂದು ಬಿಂದು ಮಾಧವಿಗೆ ಕೇಳಲಾಯಿತು. ಅದಕ್ಕೆ ಅವರು ಮುಕ್ತವಾಗಿ ಉತ್ತರಿಸಿದರು. ‘ಹೌದು, ಆದರೆ ತ್ರಿಷಾ ಬ್ರೇಕಪ್ ಆದ ತಕ್ಷಣ ಅಲ್ಲ. ಎರಡೂ ಬೇರೆ ಬೇರೆ ಸಮಯದಲ್ಲಿ ನಡೆದವು. ನಾನು ಅವರೊಂದಿಗೆ ಡೇಟಿಂಗ್ ಮಾಡಿದ್ದೆ, ಆದರೆ ತ್ರಿಷಾ ಬ್ರೇಕಪ್ ಆದ ಬಹಳ ದಿನಗಳ ನಂತರ’ ಎಂದರು.
ಸದ್ಯ ಬಿಂದು ಮಾಧವಿ ತಮಿಳಿನಲ್ಲಿ ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಟಿವಿ ಶೋಗಳನ್ನೂ ಮಾಡುತ್ತಿದ್ದಾರೆ. ಇ

