April 6, 2026
Monday, April 6, 2026
spot_img

ಇರಾನ್‌ಗೆ ಮತ್ತೊಂದು ಭಾರೀ ಹೊಡೆತ: ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಐಆರ್‌ಜಿಸಿ ಗುಪ್ತಚರ ಮುಖ್ಯಸ್ಥ ಮಜೀದ್ ಖಾದೇಮಿ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್‌ ನ ಪ್ರಬಲ ಮಿಲಿಟರಿ ಸಂಘಟನೆಯಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC)ನ ಗುಪ್ತಚರ ವಿಭಾಗದ ಮುಖ್ಯಸ್ಥ ಮೇಜರ್ ಜನರಲ್ ಮಜೀದ್ ಖಾದೇಮಿ ಅಮೆರಿಕ–ಇಸ್ರೇಲ್ ಸಂಯುಕ್ತ ದಾಳಿಯಲ್ಲಿ ಸಾವನ್ನಪ್ಪಿರುವುದಾಗಿ ಇರಾನ್ ಮೂಲಗಳು ತಿಳಿಸಿವೆ.

ಸೋಮವಾರ ಮುಂಜಾನೆ ಟೆಹ್ರಾನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರಣಿ ವೈಮಾನಿಕ ದಾಳಿಗಳು ನಡೆದಿದ್ದು, ಅದರ ವೇಳೆ ಖಾದೇಮಿ ಮೃತಪಟ್ಟಿದ್ದಾರೆ ಎಂದು ಐಆರ್‌ಜಿಸಿ ಹೇಳಿಕೆ ನೀಡಿದೆ. ದಾಳಿ ನಡೆದ ನಿಖರ ಸ್ಥಳದ ಬಗ್ಗೆ ತಕ್ಷಣದ ಮಾಹಿತಿ ಬಹಿರಂಗಪಡಿಸದಿದ್ದರೂ, ರಾಜಧಾನಿ ಸುತ್ತಲಿನ ಕೆಲವು ವಸತಿ ಪ್ರದೇಶಗಳ ಮೇಲೂ ಬಾಂಬ್ ದಾಳಿ ನಡೆದಿರುವ ವರದಿಗಳು ಹೊರಬಿದ್ದಿವೆ.

ಇದನ್ನೂ ಓದಿ:

ಮಜೀದ್ ಖಾದೇಮಿ ಹಲವು ದಶಕಗಳಿಂದ ಇರಾನ್‌ನ ಗುಪ್ತಚರ ಹಾಗೂ ಭದ್ರತಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸುಮಾರು ಐದು ದಶಕಗಳ ಸೇವಾ ಅವಧಿಯಲ್ಲಿ ಅವರು ದೇಶದ ಭದ್ರತಾ ಕಾರ್ಯತಂತ್ರ ಮತ್ತು ಗುಪ್ತಚರ ವ್ಯವಸ್ಥೆಯ ಪ್ರಮುಖ ಕೊಂಡಿಯಾಗಿದ್ದರು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಇದುವರೆಗೆ ಅಮೆರಿಕ ಮತ್ತು ಇಸ್ರೇಲ್ ಈ ದಾಳಿಯ ಬಗ್ಗೆ ಸಂಪೂರ್ಣ ಅಧಿಕೃತ ಹೇಳಿಕೆ ನೀಡದಿದ್ದರೂ, ಪ್ರದೇಶದಲ್ಲಿ ಸೈನಿಕ ಚಟುವಟಿಕೆಗಳು ತೀವ್ರಗೊಂಡಿವೆ. ಮಜೀದ್ ಖಾದೇಮಿ ಅವರ ಸಾವು ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !