ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಕದನಕ್ಕೆ ವಿರಾಮ ಘೋಷಣೆಯಾಗಿದ್ದು, ಇದರ ಬೆನ್ನಲ್ಲೇ ಭಾರತದ ಎಲ್ಪಿಜಿ ಹೊತ್ತ ಜಗ್ ವಿಕ್ರಮ್ ಹಡಗು ಹಾರ್ಮೋಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದೆ.
ಈ ಕುರಿತು ಮಾಹಿತಿ ನೀಡಿದ ಹಡಗು-ಟ್ರ್ಯಾಕಿಂಗ್ ದತ್ತಾಂಶ, ತಾತ್ಕಾಲಿಕ ಕದನ ವಿರಾಮ ಘೋಷಣೆ ಬಳಿಕ ಜಗ್ ವಿಕ್ರಮ್ ಹಡಗು ಸುಮಾರು 20,400 ಟನ್ ಎಲ್ಪಿಜಿ ಜೊತೆ ಭಾರತದತ್ತ ಆಗಮಿಸುತ್ತಿದೆ. ಏಪ್ರಿಲ್ 15, 2026 ರಂದು ಮುಂಬೈ ಬಂದರಿಗೆ ತಲುಪುವ ನಿರೀಕ್ಷೆಗಳಿವೆ ಎಂದು ತಿಳಿಸಿವೆ.
ಈಗಾಗಲೇ ಎಂಟು ಹಡಗುಗಳು ಹಾರ್ಮೋಜ್ ಜಲಸಂಧಿಯನ್ನು ದಾಟಿ ಭಾರತದ ದಡ ಸೇರಿದ್ದು, ಇದೀಗ ಜಗ್ ವಿಕ್ರಮ್ ಹಡಗು ಇರಾನ್-ಅಮೆರಿಕ ಕದನ ವಿರಾಮದ ಬಳಿಕ ಬರುತ್ತಿರುವ ಮೊದಲ ಹಡಗು ಆಗಿದ್ದು, ಇನ್ನೂ 15 ಹಡಗುಗಳು ಪರ್ಷಿಯನ್ ಕೊಲ್ಲಿಯಲ್ಲಿ ಸಿಲುಕಿಕೊಂಡಿವೆ.
ಯುದ್ಧದಿಂದಾಗಿ ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ ಪೂರೈಕೆಯು ಅಲ್ಪ ಅಡೆತಡೆಗಳು ಆಗಿದ್ದರೂ ಸದ್ಯ ಪರಿಸ್ಥಿತಿ ಸರಿಯಾಗುತ್ತಿದ್ದು, ಇದರ ನಡುವೆ ಹಡಗುಗಳ ಆಗಮನ ಜನತೆಯಲ್ಲಿ ಮತ್ತಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ.



