Sunday, January 11, 2026

ಆ್ಯಶಸ್‌ ಸೋಲಿನ ಬೆನ್ನಲ್ಲೇ ಇಂಗ್ಲೆಂಡ್‌ಗೆ ಮತ್ತೊಂದು ಶಾಕ್: ಹ್ಯಾರಿ ಬ್ರೂಕ್‌ಗೆ ಭಾರೀ ದಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾ ನೆಲದಲ್ಲಿ ನಡೆದ ಪ್ರತಿಷ್ಠಿತ ಆ್ಯಶಸ್‌ ಸರಣಿ ಇಂಗ್ಲೆಂಡ್ ಪಾಲಿಗೆ ನಿರಾಸೆ ತಂದಿದೆ. ಐದು ಪಂದ್ಯಗಳ ಸರಣಿಯನ್ನು ಆತಿಥೇಯ ಆಸ್ಟ್ರೇಲಿಯಾ 4–1 ಅಂತರದಿಂದ ಗೆದ್ದು ಕೊಂಡಿದ್ದು, ಇಂಗ್ಲೆಂಡ್ ತಂಡ ಹೀನಾಯ ಸೋಲಿನೊಂದಿಗೆ ತವರಿಗೆ ಮರಳಿದೆ. ಈ ನಡುವೆ ಇಂಗ್ಲೆಂಡ್ ಏಕದಿನ ಹಾಗೂ ಟಿ20 ತಂಡದ ನಾಯಕ ಹ್ಯಾರಿ ಬ್ರೂಕ್ ಮತ್ತೊಂದು ವಿವಾದದಲ್ಲಿ ಸಿಲುಕಿದ್ದು, ಅವರಿಗೆ ದಂಡದ ರೂಪದಲ್ಲಿ ಆಘಾತ ಎದುರಾಗಿದೆ.

ಆ್ಯಶಸ್‌ ಸರಣಿಗೆ ಮುನ್ನ ನ್ಯೂಜಿಲೆಂಡ್ ಪ್ರವಾಸದ ವೇಳೆ ನಡೆದ ಘಟನೆಗೆ ಸಂಬಂಧಿಸಿದಂತೆ, ಹ್ಯಾರಿ ಬ್ರೂಕ್ ಬಾರ್‌ನ ಬೌನ್ಸರ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ECB) ಅವರು ಮೇಲೆ ಸುಮಾರು ₹36 ಲಕ್ಷ (3.6 ಮಿಲಿಯನ್ ರೂಪಾಯಿ) ದಂಡ ವಿಧಿಸಿದೆ. ವರದಿಗಳ ಪ್ರಕಾರ, ವೆಲ್ಲಿಂಗ್ಟನ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ, ಅತಿಯಾದ ಮದ್ಯಪಾನ ಮಾಡಿದ ಕಾರಣ ಬ್ರೂಕ್‌ಗೆ ನೈಟ್ ಕ್ಲಬ್ ಪ್ರವೇಶ ನಿರಾಕರಿಸಲಾಗಿತ್ತು. ಇದರಿಂದ ಕೋಪಗೊಂಡ ಅವರು ಬೌನ್ಸರ್ ಜೊತೆ ಜಗಳಕ್ಕಿಳಿದಿದ್ದರು.

ಇದನ್ನೂ ಓದಿ: Rice series 4 | ಸಿಹಿ-ಹುಳಿ ರುಚಿಯ ಲೆಮನ್ ರೈಸ್! ಮನೆ ಮಂದಿಗೆಲ್ಲರಿಗೂ ಇಷ್ಟವಾಗುತ್ತೆ

ತನಿಖೆ ಬಳಿಕ ತಪ್ಪನ್ನು ಒಪ್ಪಿಕೊಂಡಿರುವ ಬ್ರೂಕ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದು, ಆದರೂ ಅವರನ್ನು ಏಕದಿನ ಹಾಗೂ ಟಿ20 ತಂಡದ ನಾಯಕನ ಸ್ಥಾನದಿಂದ ತೆಗೆದುಹಾಕಿಲ್ಲ. ಇದೇ ವೇಳೆ, ಇಂಗ್ಲೆಂಡ್ ತಂಡದ ಇತರ ಆಟಗಾರರ ಮೇಲೂ ಮದ್ಯಪಾನ ಸಂಬಂಧಿತ ಆರೋಪಗಳು ಕೇಳಿಬಂದಿದ್ದು, ಮುಂದಿನ ದಿನಗಳಲ್ಲಿ ECB ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

error: Content is protected !!