ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರದ ನಕ್ಸಲ್ ನಿಗ್ರಹ ಕಾರ್ಯಾಚರಣೆ ಭಾಗವಾಗಿ ಛತ್ತೀಸ್‌ಗಢದ ನಕ್ಸಲ್ ಪೀಡಿತ ಬಿಜಾಪುರ ಪ್ರದೇಶದಲ್ಲಿ103 ಸಕ್ರಿಯ ನಕ್ಸಲರು ಏಕಕಾಲಕ್ಕೆ ಪೊಲೀಸರಿಗೆ ಶರಣಾಗಿದ್ದಾರೆ.
ಪೊಲೀಸ್ ಎನ್‌ಕೌಂಟರ್ ಭೀತಿಯ ಹಿನ್ನೆಲೆ ಆರ್‌ಪಿಸಿ ಮಾವೋವಾದಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದ 22 ಮಹಿಳೆಯರು ಸೇರಿ 103 ಮಂದಿ ಮಾವೋದಿಗಳ ಗುಂಪು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬರಲು ಇಚ್ಛಿಸಿದ್ದು, ಇದು ಭದ್ರತಾ ಪಡೆಗಳ ನಿರಂತರ ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ದೊರೆತ ಮತ್ತೊಂದು ಮಹತ್ವದ ಯಶಸ್ಸು ಎಂದು ಬಣ್ಣಿಸಲಾಗಿದೆ.
ಸರ್ಕಾರದ ನಕ್ಸಲ್ ನಿರ್ಮೂಲನಾ ನೀತಿಯಡಿ ಶರಣಾದ ಎಲ್ಲ ನಕ್ಸಲರಿಗೆ ತಲಾ 50,000 ರೂ.ಗಳ ಚೆಕ್ ಅನ್ನು ಪ್ರೋತ್ಸಾಹ ಧನವಾಗಿ ನೀಡಲಾಗಿದ್ದು, ಮತ್ತು ಭವಿಷ್ಯದಲ್ಲಿ ಪುನರ್ವಸತಿ ಯೋಜನೆಯಡಿ ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಜೀವನೋಪಾಯ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಲಾಗಿದೆ. ಅಲ್ಲದೇ ಸರ್ಕಾರ ವತಿಯಿಂದ ಪುನರ್ವಸತಿ ಸೌಲಭ್ಯವನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಶರಣದಾವರ 103 ಮಂದಿಯ ಪೈಕಿ 46 ಜನರ ಮೇಲೆ 1 ಕೋಟಿ ರೂ. ಅಧಿಕ ಬಹುಮಾನ ಮೊತ್ತ ಘೋಷಿಸಲಾಗಿತ್ತು. ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗಿರುವವರಲ್ಲಿ 49 ಮಂದಿ ಮಾವೋವಾದಿಗಳು ಇದ್ದರು. ಇವರಿಗೆ ಡಿವಿಸಿಎಂ, ಪಿಪಿಸಿಎಂ, ಎಸಿಎಂ, ಮಿಲಿಟಿಯಾ ಕಮಾಂಡರ್‌ಗಳು ಮತ್ತು ಜನತಾನ ಸರ್ಕಾರ್ ಸದಸ್ಯರಂತಹ ಉನ್ನತ ಹುದ್ದೆಗಳನ್ನು ಹೊಂದಿದ್ದರು ಹಾಗೂ ಒಟ್ಟು 1.06 ಕೋಟಿ ರೂಪಾಯಿ ಬಹುಮಾನ ಸಂಗ್ರಹವಾಗಿತ್ತು. ರಾಜ್ಯದ ಪುನರ್ವಸತಿ ಮತ್ತು ಉತ್ತೇಜನ ಯೋಜನೆ, ಪುನಾ ಮಾರ್ಗೆಮ್ ಅಡಿಯಲ್ಲಿ ಈ ಶರಣಾಗತಿ ಪ್ರಕ್ರಿಯೆ ನಡೆದಿದ್ದು, ಉಪ ಪೊಲೀಸ್ ಮಹಾನಿರ್ದೇಶಕ ಕಮಲೋಚನ್ ಕಶ್ಯಪ್, ಡಿಐಜಿ ಸಿಆರ್‌ಪಿಎಫ್ ಸೆಕ್ಟರ್ ಬಿಜಾಪುರ ಬಿಎಸ್ ನೇಗಿ, ಎಸ್‌ಪಿ ಬಿಜಾಪುರ ಜಿತೇಂದ್ರ ಕುಮಾರ್ ಯಾದವ್ ಹಾಗೂ ಸಿಆರ್‌ಪಿಎಫ್ ಮತ್ತು ಕೋಬ್ರಾ ಬೆಟಾಲಿಯನ್‌ಗಳ ಹಲವಾರು ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಶರಣಾಗತಿ ನಡೆದಿದೆ. ರಾಜ್ಯ ಸರ್ಕಾರದ ಪುನರ್ವಸತಿ ಪ್ಯಾಕೇಜ್‌ಡಂಡಿ ಪ್ರತಿಯೊಬ್ಬ ಶರಣಾದ ಮಾವೋವಾದಿಗೆ 50,000 ರೂಪಾಯಿ ಚೆಕ್ ವಿತರಿಸಲಾಗಿದೆ.