March 13, 2026
Friday, March 13, 2026
spot_img

MANNERS | ಯಾರೇ ಸಿಕ್ಕರೂ ʼದಪ್ಪ ಆಗಿದ್ಯಾ, ಸಣ್ಣ ಆಗಿದ್ಯಾʼ ಇದನ್ನು ಬಿಟ್ಟು ಬೇರೆ ಕೇಳೋಕಾಗಲ್ವಾ?

ವರ್ಷಕ್ಕೊಮ್ಮೆಯಾದ್ರೂ ಸಿಗಿ, ತಿಂಗಳಿಗೊಮ್ಮೆಯಾದ್ರೂ ಸಿಗಿ ಕೆಲವು ವ್ಯಕ್ತಿಗಳು ನಿಮ್ಮನ್ನು ನೋಡಿದ ತಕ್ಷಣವೇ ಯಾಕೆ ಇಷ್ಟು ದಪ್ಪ ಆಗಿದ್ಯಾ? ಯಾಕೆ ಇಷ್ಟು ಕಪ್ಪಾಗಿದ್ಯಾ? ಯಾಕೆ ಇಷ್ಟು ಒಣಗೊ ಹೋಗಿದ್ಯ ಅನ್ನೋ ಬಾಡಿ ಶೇಮಿಂಗ್‌ ಕಮೆಂಟ್‌ಗಳನ್ನು ಮಿಸ್‌ ಮಾಡದೇ ಹೇಳುತ್ತಾರೆ. ಇದು ನಮ್ಮಲ್ಲಿ ಕಾಮನ್‌ ಆಗೋಗಿದೆ. ಈ ರೀತಿ ಕೇಳದಿದ್ರೆ ಅದು ಅಪೂರ್ಣ ಅನ್ನೋ ಥರ ಆಗೋಗಿದೆ.

ಆದರೆ ಇದು ಸರೀನಾ?

ವರ್ಷಕ್ಕೊಮ್ಮೆ ತಿಂಗಳಿಗೊಮ್ಮೆ ಸಿಗುವವರಿಗೆ ಲೈಫ್‌ ಹೇಗಿದೆ? ಮನೆ ಹೇಗಿದೆ? ಕೆಲಸ ಹೇಗೆ ನಡೀತಿದೆ ಎಂದು ಕೇಳುವ ಬದಲು ಉಪಯೋಗಕ್ಕೆ ಬಾರದ ಪ್ರಶ್ನೆಗಳನ್ನು ಕೇಳೋದು ಸರಿಯಾ? ಸಣ್ಣ ಆದ್ರೂ ಆಗಲಿ, ದಪ್ಪ ಆದ್ರೂ ಆಗಲಿ ಅದು ಅವರಿಗೆ ಗೊತ್ತಿರೋದಿಲ್ವಾ? ನಿತ್ಯ ಅವರು ಕನ್ನಡಿ ನೋಡೋದಿಲ್ವಾ? ಅವರಿಗೆ ನೂರಾರು ಸಮಸ್ಯೆ ಇರಬಹುದು. ಅದಕ್ಕೆ ನಿಮ್ಮ ಕಮೆಂಟ್‌ನ ಸೇರಿಸುವ ಅಗತ್ಯ ಇಲ್ಲ.

ಏನು ಮಾಡಬಹುದು?

ಯಾರಾದ್ರೂ ಸಿಕ್ಕಾಗ ಯೋಗಕ್ಷೇಮ ವಿಚಾರಿಸಿ, ಅವರ ಜೀವನ ಹೇಗಿದೆ? ಮನೆ ಕೆಲಸ ಹೀಗೆ ಬೇರೆ ವಿಷಯಗಳ ಬಗ್ಗೆ ಗಮನಹರಿಸಿ. ಬಾಡಿಶೇಮಿಂಗ್‌ ಮಾಡಬೇಡಿ. ಜನ ಎದುರಿಗೆ ಇರಲಿ, ಬಿಡಲಿ. ಬೇರೆಯವರ ಬಗ್ಗೆ ಒಳ್ಳೆಯದು ಹೇಳೋಕೆ ಆಗೋದಿಲ್ಲ ಅಂದ್ರೆ ಏನೂ ಹೇಳದೇ ಇರೋದು ಬೆಸ್ಟ್‌ ಅಲ್ವಾ?

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !