ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ಅವರನ್ನು ಇಂದು ತೆಲುಗು ನಟ ರಾಮ್ ಚರಣ್, ಅನಿಲ್ ಕಾಮಿನೇನಿ ಮತ್ತು ಎಪಿಎಲ್ ತಂಡ ಭೇಟಿ ಮಾಡಿದರು.
ದೆಹಲಿಯ ಯಮುನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಆರ್ಚರಿ ಪ್ರೀಮಿಯರ್ ಲೀಗ್‌ನ ಉದ್ಘಾಟನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಗೌರವಾರ್ಥವಾಗಿ ರಾಮ್ ಚರಣ್, ಅನಿಲ್ ಕಾಮಿನೇನಿ ಮತ್ತು ಎಪಿಎಲ್ ತಂಡಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಗೌರವಾರ್ಥವಾಗಿ ಬಿಲ್ಲು ನೀಡಿದರು.

ವಿಶ್ವದ ಮೊಟ್ಟಮೊದಲ ವೃತ್ತಿಪರ ಬಿಲ್ಲುಗಾರಿಕೆ ಲೀಗ್ ಆರ್ಚರಿ ಪ್ರೀಮಿಯರ್ ಲೀಗ್ (ಎಪಿಎಲ್) ಬಿಲ್ಲುಗಾರಿಕೆಯನ್ನು ಉತ್ತೇಜಿಸುವುದು ಮತ್ತು ಭಾರತೀಯ ಆಟಗಾರರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ವೇದಿಕೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಇದರಲ್ಲಿ ಜಾಗತಿಕ ಮತ್ತು ಭಾರತೀಯ ಬಿಲ್ಲುಗಾರಿಕೆ ತಾರೆಗಳು ಭಾಗವಹಿಸಿದ್ದರು. ಭಾರತದಿಂದ 36 ಮತ್ತು ಇತರ ದೇಶಗಳಿಂದ 12 ಸೇರಿದಂತೆ ಒಟ್ಟು 48 ಬಿಲ್ಲುಗಾರರೊಂದಿಗೆ ಅರು ತಂಡಗಳು ಭಾಗವಹಿಸಿದ್ದವು. ಈ ಕಾರ್ಯಕ್ರಮವು ಭಾರತದ ಸಾಂಪ್ರದಾಯಿಕ ಕ್ರೀಡೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.ಅನಿಲ್ ಕಾಮಿನೇನಿ ನೇತೃತ್ವದಲ್ಲಿ ಪ್ರಾರಂಭವಾದ ಆರ್ಚರಿ ಪ್ರೀಮಿಯರ್ ಲೀಗ್, ದೇಶಾದ್ಯಂತ ಓಲ್ಲುಗಾರಿಕೆಯನ್ನು ಪುನರುಜ್ಜಿವನಗೊಳಿಸಲು ಮತ್ತು ಉತ್ತೇಜಿಸಲು ಹೆಜ್ಜೆ ಇಟ್ಟಿದೆ.

ಸಭೆಯ ಬಳಿಕ ಮಾತನಾಡಿದ ರಾಮ್ ಚರಣ್, ಕ್ರೀಡೆಯ ಭವಿಷ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ನಮ್ಮ ಪ್ರಧಾನಿಯನ್ನು ಭೇಟಿಯಾಗಿ ಅರ್ಚರಿ ಪ್ರೀಮಿಯರ್ ಲೀಗ್‌ನ ಹಿಂದಿನ ದೃಷ್ಟಿಕೋನವನ್ನು ಹಂಚಿಕೊಳ್ಳಲು ಇದು ನಿಜಕ್ಕೂ ಗೌರವವಾಗಿದೆ. ಬಿಲ್ಲುಗಾರಿಕೆ ನಮ್ಮ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿದೆ ಮತ್ತು ಎಪಿಎಲ್ ಮೂಲಕ, ಅದನ್ನು ಮತ್ತೆ ಅಂತರರಾಷ್ಟ್ರೀಯ ಗಮನಕ್ಕೆ ತರಲು ನಾವು ಆಶಿಸುತ್ತೇವೆ ಎಂದಿದ್ದಾರೆ.