April 6, 2026
Monday, April 6, 2026
spot_img

DAILY MOTIVATION| ಕೋಪಕ್ಕೆ ಸಂಬಂಧಗಳೇ ಬಲಿಯಾಗ್ತಾ ಇದೆಯಾ? 5*5 ರೂಲ್ಸ್‌ ಬಗ್ಗೆ ತಿಳಿದುಕೊಳ್ಳಿ

ಬೇಗ ಕೋಪ ಬರುತ್ತದಾ? ನಿಮ್ಮ ಕೋಪದಿಂದ ಸಂಬಂಧಗಳ ಮಧ್ಯೆ ಬಿರುಕು ಬರುತ್ತಿದೆಯೇ? ನಿಮ್ಮ ಕೋಪವನ್ನು ಕಂಟ್ರೋಲ್‌ ಮಾಡಿಕೊಂಡ್ರೆ ಜೀವನ ಇನ್ನೂ ಚೆನ್ನಾಗಿರುತ್ತದೆ ಅನಿಸಿದ್ರೆ ಸ್ವಲ್ಪ ಕಂಟ್ರೋಲ್‌ ಮಾಡೋದ್ರಲ್ಲಿ ತಪ್ಪೇನಿದೆ?

ಇದನ್ನು ತಿಳಿದುಕೊಳ್ಳಿ..

ಬೇರೆಯವರ ಎಮೋಷನ್ಸ್‌ ಹಾಗೂ ಮಾತುಗಳನ್ನು ನೀವು ಕಂಟ್ರೋಲ್‌ ಮಾಡೋಕೆ ಸಾಧ್ಯವಿಲ್ಲ. ಆದರೆ ನಿಮ್ಮನ್ನು ನೀವು ಕಂಟ್ರೋಲ್‌ ಮಾಡಿಕೊಳ್ಳಬಹುದು ಎನ್ನೋದು ಗೊತ್ತಿರಲಿ.

ಬೇರೆಯವರ ಮಾತಿನಿಂದ ನಿಮಗೆ ಸಡನ್‌ ಆಗಿ ಕೋಪ ಬಂದ್ರೆ ನಿಮ್ಮಲ್ಲೇ ಮಾತನಾಡಿಕೊಳ್ಳಿ. ಇವರ ಮಾತು ನನಗೆ ಕೋಪ ತರಿಸುತ್ತಿದೆ. ನನ್ನಲ್ಲಿ ಬದಲಾವಣೆ ಕಾಣುತ್ತಿದೆ ಎಂದೆನಿಸದ ತಕ್ಷಣ ಅಲ್ಲಿಂದ ಜಾಗ ಖಾಲಿಮಾಡಿ.

ಬೇರೆಯವರ ಮೇಲೆ ನಿರೀಕ್ಷಿ ಇಡೋದನ್ನು ನಿಲ್ಲಿಸಿ. ಅವರು ಏನೂ ಮಾಡಲಾರರು ಎಂದುಕೊಂಡು ಜೀವನ ಮಾಡಿ. ಒಂದು ವೇಳೆ ಅವರು ಒಳ್ಳೆ ಕೆಲಸ ಮಾಡಿದರೆ ಖುಷಿ ಆಗುತ್ತದೆ.

ಒಂದು ನಿಮಿಷ ಪಾಸ್‌ ಮಾಡಿ ಜೋರಾಗಿ ಉಸಿರಾಡಿ, ಯಾವುದಾದರೂ ಜಾಗದಲ್ಲಿ ಇದ್ದರೆ ನೀವು ಖುಷಿಯಾಗಿ, ನೆಮ್ಮದಿಯಿಂದ ಇರುತ್ತೀರೋ ಆ ಜಾಗದ ಬಗ್ಗೆ ಆಲೋಚಿಸಿ.

5*5 ರೂಲ್ಸ್‌ ಮಾಡಿಕೊಳ್ಳಿ. ಯಾವುದಾದರೂ ಒಂದು ಸಂದರ್ಭ ಐದು ವರ್ಷದ ನಂತರ ನೆನಪೇ ಇರೋದಿಲ್ಲವೋ, ಮ್ಯಾಟರ್‌ ಆಗುವುದೇ ಇಲ್ಲವೋ ಅಂಥ ಸನ್ನಿವೇಶದ ಮೇಲೆ ಐದು ನಿಮಿಷಕ್ಕಿಂತ ಹೆಚ್ಚು ಸಮಯ ವೇಸ್ಟ್‌ ಮಾಡಬೇಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !