ಮೂಗಿನ ಮೇಲೆ ಪದೇ ಪದೇ ಕಾಣಿಸಿಕೊಳ್ಳುವ ಬ್ಲ್ಯಾಕ್ ಹೆಡ್ಸ್ ನಮ್ಮ ಆತ್ಮವಿಶ್ವಾಸವನ್ನೇ ಕಡಿಮೆ ಮಾಡಿಬಿಡುತ್ತವೆ. ಎಷ್ಟು ಕ್ಲೆನ್ಸಿಂಗ್ ಮಾಡಿದರೂ “ಬ್ಲ್ಯಾಕ್ ಹೆಡ್ಸ್ ಮತ್ತೆ ಮತ್ತೆ ಯಾಕೆ ಬರುತ್ತೆ?” ಅನ್ನೋ ಪ್ರಶ್ನೆ ಕಾಡುತ್ತೆ. ಇವತ್ತು ನಾವು ಮನೆಯಲ್ಲೇ ಇರುವ ಸರಳ ಪದಾರ್ಥಗಳಿಂದಲೇ ಈ ಸಮಸ್ಯೆಗೆ ಸುಲಭ ಪರಿಹಾರ ಕಂಡುಕೊಳ್ಳಬಹುದು.
- ಜೇನುತುಪ್ಪ ಮತ್ತು ನಿಂಬೆ: ಒಂದು ಚಮಚ ಜೇನುತುಪ್ಪಕ್ಕೆ ಕೆಲವು ಹನಿ ನಿಂಬೆ ರಸ ಬೆರೆಸಿ ಮೂಗಿನ ಮೇಲೆ ನಿಧಾನವಾಗಿ ಮಸಾಜ್ ಮಾಡಿ. 5–7 ನಿಮಿಷಗಳ ನಂತರ ತೊಳೆಯಿರಿ. ಇದು ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸಿ ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡುತ್ತದೆ.
- ಅಡುಗೆ ಸೋಡಾ ಪೇಸ್ಟ್: ಎರಡು ಚಮಚ ಅಡುಗೆ ಸೋಡಾಕ್ಕೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ಮಾಡಿ. ಬ್ಲ್ಯಾಕ್ ಹೆಡ್ಸ್ ಇರುವ ಜಾಗಕ್ಕೆ ಹಚ್ಚಿ 10–15 ನಿಮಿಷಗಳ ನಂತರ ತೊಳೆಯಿರಿ. ಇದು ಸತ್ತ ಚರ್ಮವನ್ನು ತೆಗೆದುಹಾಕಲು ಸಹಾಯಕ.
- ಅರಿಶಿನ ಮತ್ತು ತೆಂಗಿನ ಎಣ್ಣೆ: ಅರಿಶಿನ ಹಾಗೂ ತೆಂಗಿನ ಎಣ್ಣೆ ಮಿಶ್ರಣ ಮಾಡಿ ಹಚ್ಚಿ 15 ನಿಮಿಷಗಳ ನಂತರ ತೊಳೆಯಿರಿ. ಇದರ ಉತ್ಕರ್ಷಣ ನಿರೋಧಕ ಗುಣಗಳು ಚರ್ಮವನ್ನು ಶುದ್ಧಗೊಳಿಸುತ್ತವೆ.
- ಸ್ಟೀಮ್ ಚಿಕಿತ್ಸೆ: ವಾರಕ್ಕೆ ಒಂದೆರಡು ಬಾರಿ ಸ್ಟೀಮ್ ಮಾಡಿದರೆ ಮೂಗಿನ ರಂಧ್ರಗಳು ತೆರೆಯುತ್ತವೆ ಮತ್ತು ಕಪ್ಪು ಚುಕ್ಕೆಗಳು ಸುಲಭವಾಗಿ ಹೊರಬರುತ್ತವೆ.

