ಇಂದಿನ ಓಡಾಟದ ಬದುಕಿನಲ್ಲಿ “ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡಿದ್ರೆ ತೂಕ ಇಳಿಯುತ್ತೆ” ಅನ್ನೋ ಭ್ರಮೆ ಅನೇಕರನ್ನು ಹಿಂಬಾಲಿಸುತ್ತಿದೆ. ಸಮಯ ಇಲ್ಲ, ಹಸಿವು ಇಲ್ಲ, ಅಥವಾ ಡಯಟ್ ಹೆಸರಿನಲ್ಲಿ ಬೆಳಗಿನ ಊಟವನ್ನು ಕಡೆಗಣಿಸುವವರು ದಿನೇದಿನೇ ಹೆಚ್ಚುತ್ತಿದ್ದಾರೆ. ಆದರೆ ಈ ಅಭ್ಯಾಸ ನಿಮ್ಮ ತೂಕಕ್ಕಿಂತಲೂ ಹೆಚ್ಚು ನಿಮ್ಮ ದೇಹದ ಒಳಗಿನ ಸಮತೋಲನಕ್ಕೆ ಅಪಾಯ ತಂದೊಡ್ಡುತ್ತಿದೆ. ಬೆಳಿಗ್ಗೆ ದೇಹ ಎದ್ದ ಕೂಡಲೇ ಮೊದಲ ಆಹಾರವೇ ನಿಮ್ಮ ದೇಹದ ಇಂಧನ. ಅದನ್ನು ತಪ್ಪಿಸಿದರೆ ಪರಿಣಾಮಗಳು ನಿಧಾನವಾಗಿ ಆದರೆ ಗಂಭೀರವಾಗಿ ಕಾಣಿಸಿಕೊಳ್ಳುತ್ತವೆ.
ಮೆಟಾಬಾಲಿಸಂ ನಿಧಾನಗೊಳ್ಳುತ್ತದೆ
ಬೆಳಗಿನ ಊಟ ದೇಹದ ಮೆಟಾಬಾಲಿಸಂನ್ನು ಚಾಲನೆಗೆ ತರುತ್ತದೆ. ಅದನ್ನು ಬಿಟ್ಟರೆ ದೇಹ “ಎನರ್ಜಿ ಉಳಿಸಿಕೊಳ್ಳಬೇಕು” ಎನ್ನುವ ಮೋಡ್‌ಗೆ ಹೋಗುತ್ತದೆ. ಇದರಿಂದ ತೂಕ ಕಡಿಮೆಯಾಗುವುದಕ್ಕಿಂತ ಹೆಚ್ಚಾಗುವ ಸಾಧ್ಯತೆ ಹೆಚ್ಚು.
ದಿನಪೂರ್ತಿ ಅತಿಯಾಗಿ ಹಸಿವು
ಬ್ರೇಕ್‌ಫಾಸ್ಟ್ ತಪ್ಪಿಸಿದವರು ಮಧ್ಯಾಹ್ನ ಅಥವಾ ಸಂಜೆ ಅತಿಯಾಗಿ ತಿನ್ನುವ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ. ಜಂಕ್ ಫುಡ್, ಸಿಹಿತಿಂಡಿಗಳತ್ತ ಆಸಕ್ತಿ ಹೆಚ್ಚುತ್ತದೆ.
ಮೆದುಳಿನ ಕಾರ್ಯಕ್ಷಮತೆ ಕುಸಿತ
ಬೆಳಿಗ್ಗೆ ಮೆದುಳಿಗೆ ಬೇಕಾದ ಗ್ಲೂಕೋಸ್ ಸಿಗದಿದ್ದರೆ ಏಕಾಗ್ರತೆ, ನೆನಪು ಶಕ್ತಿ ಹಾಗೂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕುಗ್ಗುತ್ತದೆ.
ಹಾರ್ಮೋನ್ ಅಸಮತೋಲನ
ನಿಯಮಿತವಾಗಿ ಬೆಳಗಿನ ಊಟ ತಪ್ಪಿಸಿದರೆ ಇನ್ಸುಲಿನ್ ಹಾಗೂ ಕಾರ್ಟಿಸಾಲ್ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾಗಿ ಡಯಾಬಿಟೀಸ್ ಅಪಾಯ ಹೆಚ್ಚಬಹುದು.
ಗ್ಯಾಸ್ಟ್ರಿಕ್ ಹಾಗೂ ಆಸಿಡ್ ಸಮಸ್ಯೆ
ಖಾಲಿ ಹೊಟ್ಟೆಯಲ್ಲಿ ಹೆಚ್ಚು ಸಮಯ ಇರುವುದರಿಂದ ಆಸಿಡ್ ಸ್ರವಣೆ ಹೆಚ್ಚಾಗಿ ಎದೆಉರಿ, ಗ್ಯಾಸ್ಟ್ರಿಕ್, ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು.
ತೂಕ ಕಡಿಮೆ ಮಾಡಬೇಕಾದ್ರೆ ಏನು ಮಾಡಬೇಕು?
ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡುವ ಬದಲು ಪ್ರೋಟೀನ್, ಫೈಬರ್ ಇರುವ ಲಘು ಆದರೆ ಪೌಷ್ಟಿಕ ಆಹಾರ ಸೇವಿಸಿ. ಇದು ದೀರ್ಘಕಾಲ ಹೊಟ್ಟೆ ತುಂಬಿದ ಭಾವ ಕೊಡುತ್ತದೆ.
ಬೆಳಗಿನ ಉಪಹಾರ ತೂಕ ಇಳಿಸುವ ಶತ್ರು ಅಲ್ಲ, ಅದು ಆರೋಗ್ಯದ ರಕ್ಷಕ. ಬ್ರೇಕ್‌ಫಾಸ್ಟ್ ಬಿಟ್ಟು ಸ್ಲಿಮ್ ಆಗುವ ಕನಸು, ಮುಂದೆ ದೊಡ್ಡ ಆರೋಗ್ಯ ಸಮಸ್ಯೆಗೆ ಆಹ್ವಾನವಾಗಬಹುದು.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

