January18, 2026
Sunday, January 18, 2026
spot_img

Dark Lips | ನಿಮ್ಮ ತುಟಿ ಕಪ್ಪಾಗಿದ್ಯಾ? ಇದೆ ಕಾರಣ ಇರಬಹುದು ನೋಡಿ!

ಇತ್ತೀಚಿನ ದಿನಗಳಲ್ಲಿ ಒತ್ತಡಪೂರ್ಣ ಜೀವನಶೈಲಿ, ಅಸ್ಥವ್ಯಸ್ಥ ಆಹಾರ ಪದ್ಧತಿ ಮತ್ತು ಅನಾರೋಗ್ಯಕರ ಅಭ್ಯಾಸಗಳಿಂದ ಚರ್ಮ ಹಾಗೂ ತುಟಿಗಳ ಸಮಸ್ಯೆಗಳು ಹೆಚ್ಚುತ್ತಿರುವುದು ವೈದ್ಯಕೀಯ ವರದಿಗಳಲ್ಲಿ ಸ್ಪಷ್ಟವಾಗಿದೆ.

ತಜ್ಞರ ಪ್ರಕಾರ, ಧೂಮಪಾನ ಮತ್ತು ಬಿಸಿ ಪಾನೀಯಗಳ ಅತಿಯಾದ ಸೇವನೆಯೇ ಮುಖ್ಯ ಕಾರಣ. ಚಹಾ ಮತ್ತು ಕಾಫಿಯಂತಹ ಪಾನೀಯಗಳನ್ನು ಅತಿಯಾಗಿ ಕುಡಿಯುವುದರಿಂದ ದೇಹದಲ್ಲಿ ಶಾಖ ಹೆಚ್ಚಾಗಿ ತುಟಿಗಳ ತೇವಾಂಶ ಕಡಿಮೆಯಾಗುತ್ತದೆ. ಇದರಿಂದ ತುಟಿಗಳು ಒಣಗಿ ಬಿರುಕು ಬಿಡುತ್ತವೆ ಮತ್ತು ಕ್ರಮೇಣ ಕಪ್ಪು ವರ್ಣದ್ರವ್ಯ ಬೆಳೆಯುವ ಸಾಧ್ಯತೆ ಇದೆ. ಧೂಮಪಾನದಲ್ಲಿರುವ ನಿಕೋಟಿನ್ ತುಟಿಗಳ ಕಪ್ಪಾಗುವಿಕೆಗೆ ಪ್ರಮುಖ ಕಾರಣವೆಂದು ವೈದ್ಯರು ಎಚ್ಚರಿಸಿದ್ದಾರೆ.

ಸಮಸ್ಯೆ ತೀವ್ರವಾಗುವ ಮುನ್ನ ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸುವುದು ಅಗತ್ಯ. ಜೊತೆಗೆ ತುಟಿಗಳ ತೇವಾಂಶ ಕಾಪಾಡಿಕೊಳ್ಳಲು ಲಿಪ್ ಬಾಮ್ ಮತ್ತು ಮಾಯಿಶ್ಚರೈಸರ್ ಬಳಸಬೇಕು. ಮನೆಯಲ್ಲೇ ಲಭ್ಯವಿರುವ ಅಲೋವೆರಾ ಜೆಲ್, ದೇಸಿ ತುಪ್ಪ, ತೆಂಗಿನ ಎಣ್ಣೆ ಮುಂತಾದ ನೈಸರ್ಗಿಕ ಉತ್ಪನ್ನಗಳು ತುಟಿಗಳನ್ನು ಮೃದುಗೊಳಿಸಲು ಸಹಕಾರಿಯಾಗುತ್ತವೆ. ಅಗತ್ಯವಿದ್ದರೆ ವೈದ್ಯಕೀಯ ಸಲಹೆಯ ಮೇರೆಗೆ ವರ್ಣದ್ರವ್ಯ ಕಡಿಮೆ ಮಾಡುವ ಚಿಕಿತ್ಸೆಗಳನ್ನು ಸಹ ಬಳಸಬಹುದು.

ಆಹಾರದಲ್ಲೂ ಬದಲಾವಣೆ ಅಗತ್ಯ. ವಿಟಮಿನ್ ಎ, ಸಿ ಮತ್ತು ಇ ಸಮೃದ್ಧವಾಗಿರುವ ಕಿತ್ತಳೆ, ಪೇರಲ, ಟೊಮೆಟೊ, ಕ್ಯಾರೆಟ್, ಪಾಲಕ್ ಮುಂತಾದ ಹಣ್ಣು-ತರಕಾರಿಗಳನ್ನು ಸೇವನೆ ಮಾಡಿದರೆ ಚರ್ಮಕ್ಕೆ ಪೋಷಕಾಂಶ ದೊರೆತು ತುಟಿಗಳ ನೈಸರ್ಗಿಕ ಬಣ್ಣ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

Must Read

error: Content is protected !!