ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾ ಕಪ್ ಫೈನಲ್‌ಗೆ ಮುನ್ನ ಪಾಕಿಸ್ತಾನದೊಂದಿಗೆ ಫೋಟೋಶೂಟ್ ಮಾಡಲು ಭಾರತ ಕ್ರಿಕೆಟ್ ತಂಡ ನಿರಾಕರಿಸಿದೆ.
ಸಂಪ್ರದಾಯದ ಪ್ರಕಾರ, ನಾಯಕರಾದ ಸೂರ್ಯಕುಮಾರ್ ಯಾದವ್ ಮತ್ತು ಸಲ್ಮಾನ್ ಅಲಿ ಅಘಾ ಅವರು IND vs PAK ಪ್ರಶಸ್ತಿ ಘರ್ಷಣೆಗೂ ಮುನ್ನ ಟ್ರೋಫಿಯೊಂದಿಗೆ ಒಟ್ಟಿಗೆ ಪೋಸ್ ನೀಡಬೇಕಾಗಿತ್ತು. ಆದಾಗ್ಯೂ, ಎರಡೂ ದೇಶಗಳ ನಡುವೆ ನಡೆಯುತ್ತಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು, ಫೋಟೋಶೂಟ್ ಮಾಡದಿರಲು ನಿರ್ಧರಿಸಿದೆ.
ಏಷ್ಯಾ ಕಪ್ ಫೈನಲ್‌ಗೆ ಮುನ್ನ ಪಾಕಿಸ್ತಾನದೊಂದಿಗೆ ಫೋಟೋಶೂಟ್‌ನಲ್ಲಿ ಆಸಕ್ತಿ ಇಲ್ಲ ಎಂದು ಟೀಂ ಇಂಡಿಯಾ ತಿಳಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ಹಿಂದೆ ಎರಡೂ ತಂಡಗಳು ಆಡಿದ ಎರಡೂ ಪಂದ್ಯಗಳಲ್ಲಿ ಭಾರತ ಪಾಕಿಸ್ತಾನದೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ್ದರು. ಹ್ಯಾಂಡ್‌ಶೇಕ್ ತಿರಸ್ಕಾರವು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.