Tuesday, September 30, 2025

ಆನ್‌ಲೈನ್ ಬೆಟ್ಟಿಂಗ್‌ಗೆ ವೃದ್ಧರ ಪಿಂಚಣಿ ಹಣ ನುಂಗಿದ ಆಸಾಮಿ: ಆಮೇಲೆ ಏನ್ ಮಾಡ್ದ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಆನ್‌ಲೈನ್ ಬೆಟ್ಟಿಂಗ್‌ಗೆ ದಾಸನಾಗಿ ಬಡವರ ಹಣಕ್ಕೆ ಕನ್ನ ಹಾಕಿ ಪರಾರಿಯಾಗಿದ್ದಾನೆ. ಚಿಕ್ಕಬಳ್ಳಾಪುರ ತಾಲೂಕಿನ ಚಿಕ್ಕಪೈಲಗುರ್ಕಿ ಗ್ರಾಮದ ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೋಸ್ಟ್ ಮಾಸ್ಟರ್ ನಿಂಗೇಶ್ ಎಂಬಾತ ಬಡವರ ಹಣವನ್ನೇ ಆನ್‌ಲೈನ್ ಬೆಟ್ಟಿಂಗ್‌ಗೆ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ನೂರಾರು ಮಂದಿ ಹಳ್ಳಿ ಜನ ದುಡಿದ ಹಣವನ್ನ ಅಂಚೆ ಕಚೇರಿಯ ಖಾತೆಗಳಲ್ಲಿ ಜಮೆ ಮಾಡಿಕೊಂಡಿದ್ರು. ಅದರಲ್ಲೂ ಹಳ್ಳಿಗಾಡಿನಲ್ಲಿ ವಯೋವೃದ್ಧರಿಗೆ ಬರುವ ಪಿಂಚಣಿ ಸಹ ಇದೇ. ಪೆನ್ಷನ್, ಕೂಲಿ, ಆರ್‌ಡಿ, ಎಫ್‌ಡಿ ಹೀಗೆ ಬಡವರ ಖಾತಗೆಳಲ್ಲಿರಬೇಕಾದ ಹಣವನ್ನೆಲ್ಲಾ ಪೋಸ್ಟ್ ಮಾಸ್ಟರ್ ಆನ್‌ಲೈನ್ ಗೇಮ್‌ಗಾಗಿ ಬಳಸಿಕೊಂಡಿದ್ದಾನೆ. ಆದರೆ, ಈಗ ಬರೋಬ್ಬರಿ 10 ಲಕ್ಷಕ್ಕೂ ಅಧಿಕ ಹಣವನ್ನ ದುರುಪಯೋಗ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

ವಿಷಯ ಬೆಳಕಿಗೆ ಬಂದ ತಕ್ಷಣ, ಅಂಚೆ ನಿರೀಕ್ಷಕರು ಹಾಗೂ ಉಪವಿಭಾಗಾಧಿಕಾರಿ ಶಶಿಕುಮಾರ್ ಚಿಕ್ಕಪೈಲಗುರ್ಕಿ ಅಂಚೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿಂಗೇಶ್ ಪರಾರಿಯಾಗಿದ್ದು, ಹೀಗಾಗಿ ಮೇಲಾಧಿಕಾರಿಗಳು ಆತನನ್ನ ಅಮಾನತು ಮಾಡಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.