Monday, January 12, 2026

ಉತ್ತರ ಪ್ರದೇಶಕ್ಕೆ ಬಂದ ಗಗನಯಾತ್ರಿ ಶುಭಾಂಶು ಶುಕ್ಲಾಗೆ ಸಿಕ್ಕಿತು ಅದ್ದೂರಿ ಸ್ವಾಗತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಸೋಮವಾರ ಉತ್ತರ ಪ್ರದೇಶದ ಲಖನೌನಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಮತ್ತು ಪರೀಕ್ಷಾ ಪೈಲಟ್ ಆಗಿರುವ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಭೇಟಿ ನೀಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮೊದಲ ಗಗನಯಾತ್ರಿಯಾಗಿ ಗುರುತಿಸಿಕೊಂಡಿದ್ದಾರೆ.

ಶುಭಾಂಶು ಶುಕ್ಲಾ ತಮ್ಮ ಐತಿಹಾಸಿಕ ಬಾಹ್ಯಾಕಾಶ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ ಅನಂತರ ಮೊದಲ ಬಾರಿಗೆ ಸೋಮವಾರ ತಮ್ಮ ಹುಟ್ಟೂರು ಲಖನೌಗೆ ಆಗಮಿಸಿದರು. ಈ ವೇಳೆ ಅವರನ್ನು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಮತ್ತು ಇತರ ಅಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ಅವರು ಲಖನೌನಲ್ಲಿ ಬಂದು ಇಳಿಯುತ್ತಿದ್ದಂತೆ ಅವರ ಸೇರಿದ್ದ ಜನಸಮೂಹ ಹರ್ಷೋದ್ಗಾರ ಮಾಡಿ ಸ್ವಾಗತಿಸಿತು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

https://x.com/PTI_News/status/1959817632850526525?ref_src=twsrc%5Etfw%7Ctwcamp%5Etweetembed%7Ctwterm%5E1959817632850526525%7Ctwgr%5E79e501f4d144ca87b2c4e58852571d32fe65a89a%7Ctwcon%5Es1_&ref_url=https%3A%2F%2Fvishwavani.news%2F%2Fnational%2Fshubhanshu-shukla-a-grand-welcome-for-shubhanshu-shukla-in-lucknow-52933.html

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶುಕ್ಲಾ ಅವರ ತಾಯಿ ಆಶಾ ಶುಕ್ಲಾ’ʼನನ್ನ ಮಗ ಒಂದೂವರೆ ವರ್ಷಗಳ ಅನಂತರ ಮನೆಗೆ ಬರುತ್ತಿದ್ದಾನೆ. ಬಹಳ ದಿನಗಳ ಅನಂತರ ನಾನು ಅವನನ್ನು ಭೇಟಿಯಾಗುತ್ತಿದ್ದೇನೆ. ತುಂಬಾ ಸಂತೋಷ ಮತ್ತು ಉತ್ಸುಕಳಾಗಿದ್ದೇನೆ. ಇಡೀ ಕುಟುಂಬ ಅವನನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಆಗಮಿಸಿದೆʼ ಎಂದು ಹೇಳಿದರು.

ಸಹೋದರನ ಮರಳುವಿಕೆಯ ಬಗ್ಗೆ ಮಾತನಾಡಿದ ಶುಕ್ಲಾ ಅವರ ಸಹೋದರಿ, ನಾನು ತುಂಬಾ ಸಂತೋಷ ಮತ್ತು ಉತ್ಸುಕಳಾಗಿದ್ದೇನೆ. ಅನೇಕ ದಿನಗಳಿಂದ ಈ ಸಮಯಕ್ಕಾಗಿ ಕಾಯುತ್ತಿದ್ದೆವು. ಅಂತಿಮವಾಗಿ ಅವನು ಲಖನೌಗೆ ಆಗಮಿಸುತ್ತಿದ್ದಾನೆ. ಇದು ಅತ್ಯಂತ ದೊಡ್ಡ ಸಾಧನೆ. ಎಲ್ಲ ಮಕ್ಕಳು ಮತ್ತು ಇಡೀ ಲಖನೌ ಅವರನ್ನು ಮನೆಗೆ ಸ್ವಾಗತಿಸಲು ಕಾಯುತ್ತಿದೆ. ಇದಕ್ಕಿಂತ ಸಂತೋಷವಾದುದು ಯಾವುದೂ ಇಲ್ಲ. ಜನರು ಅವರಿಗೆ ತುಂಬಾ ಪ್ರೀತಿಯನ್ನು ತೋರಿಸುತ್ತಿದ್ದಾರೆ ಮತ್ತು ಅವರು ಮಕ್ಕಳನ್ನು ಪ್ರೇರೇಪಿಸುತ್ತಿದ್ದಾರೆʼʼ ಎಂದರು.

Related articles

Comments

LEAVE A REPLY

Please enter your comment!
Please enter your name here

ಇತರರಿಗೂ ಹಂಚಿ

Latest articles

Newsletter

error: Content is protected !!