January15, 2026
Thursday, January 15, 2026
spot_img

ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಘಟಕದ ಮೇಲೆ ದಾಳಿ: 47 ಜನರ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಉಮಾರ್ತಿ ಗ್ರಾಮದಲ್ಲಿ ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಘಟಕಗಳ ಮೇಲೆ ಶನಿವಾರ ಪುಣೆ ಪೊಲೀಸರು ದಾಳಿ ನಡೆಸಿ 47 ಜನರನ್ನು ಬಂಧಿಸಿ ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ನಾಲ್ಕು ಕಾರ್ಖಾನೆಗಳನ್ನು ಕೆಡವಲಾಗಿದೆ. ದಾಳಿ ನಡೆಸಿದಾಗ ಎರಡು ಪಿಸ್ತೂಲ್‌ಗಳು, ಐದು ಮ್ಯಾಗಜೀನ್‌ಗಳು ಮತ್ತು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಬಳಸುವ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಾಧ ವಿಭಾಗದ ಸಿಬ್ಬಂದಿ ಮತ್ತು ವೈರ್‌ಲೆಸ್, ಡ್ರೋನ್, ಕಣ್ಗಾವಲು ಮತ್ತು ಸೈಬರ್ ವಿಭಾಗಗಳ ಅಧಿಕಾರಿಗಳನ್ನು ಒಳಗೊಂಡ 105 ಸದಸ್ಯರ ತಂಡವು ಈ ದಾಳಿಯನ್ನು ನಡೆಸಿತ್ತು.

Most Read

error: Content is protected !!