March 21, 2026
Saturday, March 21, 2026
spot_img

ಅಬುಧಾಬಿ, ದುಬೈ, ಸೌದಿ ಅರೇಬಿಯಾದ ರಿಯಾದ್ ಮೇಲೂ ದಾಳಿ: ಆತಂಕದಲ್ಲಿ ಗಲ್ಫ್ ರಾಷ್ಟ್ರಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿ ದಾಳಿ ನಡೆಸಿದ ಬೆನ್ನಿಗೇ ಪ್ರತಿದಾಳಿ ನಡೆಸಿರುವ ಇರಾನ್, ಕತಾರ್ ಮಾತ್ರವಲ್ಲದೆ ಯುಎಇನ ಅಬುಧಾಬಿ, ದುಬೈ, ಸೌದಿ ಅರೇಬಿಯಾದ ರಿಯಾದ್ ಮೇಲೆ ಕೂಡಾ ದಾಳಿ ನಡೆಸಿದೆ.

ನಮಗೆ ಸ್ಪೋಟದ ಸದ್ದು ಕೇಳಿಬಂತು. ಕ್ಷಿಪಣಿಗಳು ಆಕಾಶಾದಾದ್ಯಂತ ಹಾರಾಡುತ್ತಿರುವುದು ಕಂಡುಬಂತು. ಅದೊಂದು ದೊಡ್ಡ ಸ್ಪೋಟವಾಗಿತ್ತು. ಸ್ಪೋಟದ ತೀವ್ರತೆಗೆ ಕಿಟಕಿಗಳು ನಡುಗಿದವು ಎಂದು ದುಬೈ ನಿವಾಸಿಗಳು ತಿಳಿಸಿದ್ದಾರೆ.

ಆಕಾಶದಾದ್ಯಂತ ಕ್ಷಿಪಣಿ ಹಾರಾಟ ನಡೆಸುತ್ತಿರುವುದನ್ನು ಕಂಡೆವು, ಜೊತೆಗೆ ಭಾರೀ ಸ್ಪೋಟದ ಸದ್ದು ಕೂಡಾ ಕೇಳಿಬಂತು. ಸೋಟದ ತೀವ್ರತೆಗೆ ನಮ್ಮ ಕಿಟಕಿ ಗಾಜುಗಳು ನಡುಗಿದವು ಎಂದು ದುಬೈ ನಿವಾಸಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ನಡುವೆ ಅಬುಧಾಬಿ ವಸತಿ ಪ್ರದೇಶದಲ್ಲಿ ಕೆಲವು ಕ್ಷಿಪಣಿ ಅವಶೇಷಗಳು ಕಂಡುಬಂದಿದ್ದು, ಏಷ್ಯಾದ ಪ್ರಜೆಯೊಬ್ಬ ಸಾವನ್ನಪ್ಪಿದ್ದಾರೆ ಎಂದು ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !