March 7, 2026
Saturday, March 7, 2026
spot_img

ಕೊಚ್ಚಿ ಬಂದರಿನಲ್ಲಿ ಇರಾನ್ ಹಡಗಿನ ಫೋಟೋ ತೆಗೆಯಲು ಯತ್ನ: ಮಾಧ್ಯಮ ಪ್ರತಿನಿಧಿಗಳ ಅರೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ನಡುವೆ ಕೇರಳದ ಕೊಚ್ಚಿ ಬಂದರಿನಲ್ಲಿ ಇರಾನಿನ ನೌಕಾ ಹಡಗನ್ನು ಲಂಗರು ಹಾಕಲಾಗಿದ್ದು, ಈ ಹೈ ಸೆಕ್ಯುರಿಟಿ ವಲಯಕ್ಕೆ ಅಕ್ರಮವಾಗಿ ಪ್ರವೇಶಿಸಿ ಹಡಗಿನ ಫೋಟೋ ಮತ್ತು ವಿಡಿಯೋಗಳನ್ನು ತೆಗೆದ ಆರೋಪದ ಮೇಲೆ ಇಬ್ಬರು ಮಾಧ್ಯಮ ಪ್ರತಿನಿಧಿಗಳು ಮತ್ತು ದೋಣಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಬಂದರಿನ ಪೊಲೀಸರು ಪ್ರಮುಖ ಟಿವಿ ಚಾನೆಲ್‌ನ ವರದಿಗಾರ, ಅದರ ಕ್ಯಾಮೆರಾಮನ್ ಮತ್ತು ಸ್ಪೀಡ್ ಬೋಟ್ ಚಾಲಕನನ್ನು ಬಂಧಿಸಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇಂದು ಬೆಳಗ್ಗೆ 7.50 ರ ಸುಮಾರಿಗೆ ವಿಲ್ಲಿಂಗ್ಟನ್ ದ್ವೀಪದಲ್ಲಿರುವ ಕೊಚ್ಚಿನ್ ಬಂದರಿನ ಹೈ ಸೆಕ್ಯುರಿಟಿ ಪ್ರದೇಶವಾದ ಸದರ್ನ್ ಕಾಯಿಲ್ ಬರ್ತ್(SCB)ಗೆ ಕಾನೂನುಬಾಹಿರವಾಗಿ ಪ್ರವೇಶಿಸಿದ್ದಾರೆ.ಆರೋಪಿಗಳು ತಾವು ಮಾಡಿದ ವಿಡಿಯೋದ ದೃಶ್ಯಗಳನ್ನು ಪ್ರಸಾರ ಮಾಡಲು ಪ್ರಯತ್ನಿಸಿದ್ದು, ಇದು ದೇಶದ, ವಿಶೇಷವಾಗಿ ರಾಜ್ಯದ ಭದ್ರತೆಗೆ ಅಪಾಯವನ್ನುಂಟುಮಾಡಬಹುದು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಬಂದರು ಅಪರಾಧ ಪೊಲೀಸರು. ಬಿಎನ್‌ಎಸ್‌ನ ಸೆಕ್ಷನ್ 329 (3) (ಕ್ರಿಮಿನಲ್ ಅತಿಕ್ರಮಣ) ಮತ್ತು ಅಧಿಕೃತ ರಹಸ್ಯ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !