January17, 2026
Saturday, January 17, 2026
spot_img

ಬೆಂಗಳೂರಿಗರ ಗಮನಕ್ಕೆ: ನಿಮ್ಮ ಏರಿಯಾದಲ್ಲಿ ಇಂದು, ನಾಳೆ ಕರೆಂಟ್ ಇರಲ್ಲ ಎಚ್ಚರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ನಾಗರಿಕರೇ ಗಮನಿಸಿ, ನಗರದ ಪ್ರಮುಖ ಪ್ರದೇಶಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಡಿಸೆಂಬರ್ 22 ಮತ್ತು 23ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಸಮಯ: ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ (ಕೆಲವೆಡೆ ಸಂಜೆ 4:00 ರವರೆಗೆ).

ಕಾರಣ: 66/11KV ಕಂಬೀಪುರ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣೆ ಮತ್ತು ಪ್ರೆಸ್ಟೀಜ್ ಫಾಲ್ಕಾನ್ ಸಿಟಿ ಉಪಕೇಂದ್ರ ವ್ಯಾಪ್ತಿಯ ಕಾಮಗಾರಿಗಳು.

ವಿದ್ಯುತ್ ಕಡಿತವಾಗುವ ಪ್ರಮುಖ ಪ್ರದೇಶಗಳು:

ಕಂಬೀಪುರ ಸ್ಟೇಷನ್ ವ್ಯಾಪ್ತಿ: ಕಂಬೀಪುರ, ಕಾರುಬೆಲೆ, ಹೆಚ್ ಗೊಲ್ಲಹಳ್ಳಿ, ಕಾಟನಾಯಕನಪುರ, ವರಹಸಂದ್ರ, ಸ್ವಾಮೀಜಿನಗರ, ಅಂಚೆಪಾಳ್ಯ, ಅಪ್ರಮೇಯನಗರ, ಕೃಷ್ಣ ಟೆಂಪಲ್ ಸರ್ಕಾರಿ ಶಾಲೆ ಸುತ್ತಮುತ್ತ, ಪ್ರಾವಿಡೆಂಡ್ ಅಪಾರ್ಟ್‌ಮೆಂಟ್, ವಿ.ಬಿ.ಹೆಚ್.ಸಿ ಅಪಾರ್ಟ್‌ಮೆಂಟ್, ಇ.ಸಿ. ಎನೋ ಶಾಲಿಜೋ ರೋಡ್, ಗುಡ್‌ಅರ್ಥ್, ಶ್ರೀನಿಧಿ ಗ್ರೀನ್ ಲೇಔಟ್, ದೇವಗೆರೆ, ಆನೆಪಾಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಪ್ರೆಸ್ಟೀಜ್ ಫಾಲ್ಕಾನ್ ಸಿಟಿ ವ್ಯಾಪ್ತಿ (80ಕ್ಕೂ ಅಧಿಕ ಬಡಾವಣೆಗಳು): ಫೋರಮ್ ಮಾಲ್, ಪ್ರೆಸ್ಟೀಜ್ ಫಾಲ್ಕಾನ್ ಸಿಟಿ ಅಪಾರ್ಟ್‌ಮೆಂಟ್, ದೊಡ್ಡಕಲ್ಲಸಂದ್ರ, ಕನಕಪುರ ಮುಖ್ಯರಸ್ತೆ, ನಾರಾಯಣ ನಗರ 3ನೇ ಬ್ಲಾಕ್, ಮುನಿ ರೆಡ್ಡಿ ಲೇಔಟ್, ಕುಮಾರನ್ಸ್ ಶಾಲೆ, ಜ್ಯೋತಿ ಲೇಔಟ್, ಗಂಗಪತಿಪುರ, ಸುಪ್ರಜ ನಗರ, ಜೆಎಸ್ಎಸ್ ಶಾಲೆ ಸುತ್ತಮುತ್ತಲಿನ ಪ್ರದೇಶಗಳು.

ಬೆಸ್ಕಾಂ ಕೈಗೊಂಡಿರುವ ಈ ನಿರ್ವಹಣಾ ಕಾರ್ಯದಿಂದಾಗಿ ಸಾರ್ವಜನಿಕರು ಸಹಕರಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

Must Read

error: Content is protected !!