January16, 2026
Friday, January 16, 2026
spot_img

ರೈಲು ಪ್ರಯಾಣಿಕರ ಗಮನಕ್ಕೆ: ಶಿವಮೊಗ್ಗ-ಬೆಂಗಳೂರು ನಡುವಿನ ರೈಲು ಸಂಚಾರದಲ್ಲಿ ವ್ಯತ್ಯಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೈಲ್ವೆ ಯಾರ್ಡ್ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಶಿವಮೊಗ್ಗದಿಂದ ಬೆಂಗಳೂರು ಮತ್ತು ಚಿಕ್ಕಮಗಳೂರು ಮಾರ್ಗವಾಗಿ ಸಂಚರಿಸುವ ಪ್ರಮುಖ ರೈಲುಗಳ ವೇಳಾಪಟ್ಟಿಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಿಸಿದೆ.

ಅರಸೀಕೆರೆ, ಬೀರೂರು, ಚಿಕ್ಕಜಾಜೂರು ಮತ್ತು ಹರಿಹರ ರೈಲ್ವೆ ಯಾರ್ಡ್‌ಗಳಲ್ಲಿ ಗರ್ಡ‌್ರಗಳ ಅಳವಡಿಕೆ ಹಾಗೂ ತೆರವು ಕಾರ್ಯ ನಡೆಯುತ್ತಿರುವುದರಿಂದ ಲೈನ್ ಬ್ಲಾಕ್ ಮತ್ತು ವಿದ್ಯುತ್ ಬ್ಲಾಕ್ ಮಾಡಲಾಗುತ್ತಿದೆ. ಈ ತಾಂತ್ರಿಕ ಕಾರಣಗಳಿಂದಾಗಿ ಮುಂದಿನ ಕೆಲವು ದಿನಗಳ ಕಾಲ ಪ್ರಯಾಣಿಕರು ವಿಳಂಬವನ್ನು ಎದುರಿಸಬೇಕಾಗಬಹುದು.

ರೈಲುಗಳ ವಿಳಂಬದ ವಿವರ ಇಲ್ಲಿದೆ:

ಶಿವಮೊಗ್ಗ ಟೌನ್-ತುಮಕೂರು ಎಕ್ಸ್‌ಪ್ರೆಸ್‌ (16568): ಡಿಸೆಂಬರ್ 29 ರಿಂದ ಜನವರಿ 1 ರವರೆಗೆ ಹಾಗೂ ಜನವರಿ 3 ರಿಂದ 7 ರವರೆಗೆ ಈ ರೈಲು ಮಾರ್ಗಮಧ್ಯೆ 90 ನಿಮಿಷಗಳ ಕಾಲ ತಡವಾಗಿ ಸಂಚರಿಸಲಿದೆ.

ಜನಶತಾಬ್ದಿ ಎಕ್ಸ್‌ಪ್ರೆಸ್‌ (12090): ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುವ ಈ ಜನಪ್ರಿಯ ರೈಲು ಡಿ. 29 ರಿಂದ ಜ. 1 ಮತ್ತು ಜ. 3 ರಿಂದ 7 ರವರೆಗೆ ಮಾರ್ಗಮಧ್ಯೆ ಸುಮಾರು 30 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.

ಚಿಕ್ಕಮಗಳೂರು-ಶಿವಮೊಗ್ಗ ಪ್ಯಾಸೆಂಜರ್ (56272): ಈ ರೈಲು ಜನವರಿ 20 ರಿಂದ 22 ರವರೆಗೆ ಹಾಗೂ ಜ. 24 ರಿಂದ 26 ರವರೆಗೆ ಚಿಕ್ಕಮಗಳೂರಿನಿಂದ ನಿಗದಿತ ಸಮಯಕ್ಕಿಂತ 30 ನಿಮಿಷ ತಡವಾಗಿ ಹೊರಡಲಿದೆ.

ಮೈಸೂರು ವಿಭಾಗದ ವಿಭಾಗೀಯ ಹಣಕಾಸು ವ್ಯವಸ್ಥಾಪಕರು ಈ ಬಗ್ಗೆ ಮಾಹಿತಿ ನೀಡಿದ್ದು, ರೈಲ್ವೆ ಅಭಿವೃದ್ಧಿ ಕೆಲಸಗಳಿಗೆ ಪ್ರಯಾಣಿಕರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ. ಪ್ರಯಾಣದ ಮೊದಲು ನಿಖರ ಸಮಯಕ್ಕಾಗಿ ರೈಲ್ವೆ ಅಧಿಕೃತ ಆಪ್ ಅಥವಾ ವಿಚಾರಣಾ ಕೇಂದ್ರವನ್ನು ಸಂಪರ್ಕಿಸುವುದು ಉತ್ತಮ.

Must Read

error: Content is protected !!