April 10, 2026
Friday, April 10, 2026
spot_img

ಈ ರೀತಿ ಮರ್ಯಾದೆ ತೆಗಿಬಾರ್ದು! ಬಾಬರ್ ಆಟದ ಶೈಲಿ ಆಕ್ರಮಣಕಾರಿಯಾಗಿಲ್ಲ ಎಂದ ಕೋಚ್ ಮೈಕ್ ಹೆಸ್ಸನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ತಂಡದಲ್ಲಿ ಬಾಬರ್ ಆಝಂ ಪಾತ್ರದ ಕುರಿತು ಪ್ರಶ್ನೆಗಳು ಕೇಳಿಬರುತ್ತಿವೆ. ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಅವರನ್ನು ನಾಲ್ಕನೇ ಕ್ರಮಾಂಕದಲ್ಲೂ ಕಣಕ್ಕಿಳಿಸದ ಕಾರಣದ ಬಗ್ಗೆ ಕೇಳಿದಾಗ ಕೋಚ್ ಮೈಕ್ ಹೆಸ್ಸನ್ ಸ್ಪಷ್ಟನೆ ನೀಡಿದರು.

ಮೂರನೇ ವಿಕೆಟ್ 12ನೇ ಓವರ್‌ನಲ್ಲಿ ಬಿದ್ದ ಸಂದರ್ಭ ತಂಡಕ್ಕೆ ವೇಗದ ರನ್ ಅಗತ್ಯವಿತ್ತು. ಬಾಬರ್ ಆಕ್ರಮಣಕಾರಿ ಶೈಲಿಯ ಆಟಗಾರರಲ್ಲ ಎಂಬ ಕಾರಣಕ್ಕೆ ಖ್ವಾಜಾ ನಫಾಯ್ ಮತ್ತು ಶಾದಾಬ್ ಖಾನ್‌ಗೆ ಮುಂಬಡ್ತಿ ನೀಡಲಾಯಿತು ಎಂದು ಹೆಸ್ಸನ್ ಹೇಳಿದ್ದಾರೆ. ಪವರ್‌ಪ್ಲೇನಲ್ಲಿ ಬಾಬರ್ ಅವರ ಸ್ಟ್ರೈಕ್ ರೇಟ್ 100 ಕ್ಕಿಂತ ಕಡಿಮೆ ಇರುವುದರಿಂದ ಅವರನ್ನು ಆರಂಭಿಕ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದೂ ತಿಳಿಸಿದರು.

ಇದನ್ನೂ ಓದಿ:

ಮಧ್ಯಮ ಓವರ್‌ಗಳಲ್ಲಿ ಇನ್ನಿಂಗ್ಸ್‌ಗೆ ಸ್ಥಿರತೆ ನೀಡುವ ಸಾಮರ್ಥ್ಯ ಬಾಬರ್‌ಗಿದೆ. ಆದರೆ ವೇಗವಾಗಿ ರನ್ ಕಲೆಹಾಕಬೇಕಾದ ಹಂತದಲ್ಲಿ “ಪವರ್ ಹಿಟ್ಟರ್” ಅಗತ್ಯವಿರುತ್ತದೆ ಎಂಬುದು ಕೋಚ್ ಅಭಿಪ್ರಾಯ. ಬಾಬರ್ ತಮ್ಮ ಸ್ಟ್ರೈಕ್ ರೇಟ್ ಹೆಚ್ಚಿಸುವತ್ತ ಮತ್ತು ಸ್ಪಿನ್ ವಿರುದ್ಧ ಸುಧಾರಿಸುವತ್ತ ಗಮನಹರಿಸಬೇಕು ಎಂದೂ ಸೂಚನೆ ನೀಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !