ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಚ್ಛೇದನ ಪಡೆದು ದೂರಾದ ಹೆಂಡತಿಯ ಮೇಲಿನ ಸಿಟ್ಟಿನಲ್ಲಿ ತಂದೆಯೊಬ್ಬ ಮಗುವಿನ ಮೇಲೆ ಅತಿಯಾಗಿ ಹಲ್ಲೆ ಮಾಡಿದ್ದಾನೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಗ್ರಾಮದಲ್ಲಿ 7 ವರ್ಷದ ಬಾಲಕನಿಗೆ ತಂದೆ ಚಿತ್ರಹಿಂಸೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಬಾಲಕನ ಅಂಗೈ ಮೇಲೆ ಸುಟ್ಟ ಗುರುತುಗಳು ಪತ್ತೆಯಾಗಿದೆ. ತಂದೆ ವಿಜಯ್ ನಾಯ್ಕ ತನ್ನ ಏಳು ವರ್ಷದ ಮಗನಿಗೆ ಮನಸೋ ಇಚ್ಛೆ ಥಳಿಸಿದ್ದಾನೆ. ಜತೆಗೆ ಬಾಲಕನ ಕಣ್ಣಿಗೆ ಖಾರದಪುಡಿ ಎರಚಿ, ಬಾತ್‌ರೂಮ್‌ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾನೆ ಎಂದು ಹೇಳಲಾಗಿದೆ.
13 ವರ್ಷಗಳ ಹಿಂದೆ ಚಿತ್ರಾ ಎಂಬುವವರನ್ನು ವಿವಾಹವಾಗಿದ್ದ ವಿಜಯ್, ಕೆಲ ವರ್ಷಗಳ ಹಿಂದೆ ಪತ್ನಿಗೆ ವಿಚ್ಛೇದನ ನೀಡಿದ್ದಾನೆ. ಕೋರ್ಟ್ ಆದೇಶದಂತೆ ವಿಜಯ್ ಮಕ್ಕಳನ್ನ ನೋಡಿಕೊಳ್ಳುತ್ತಿದ್ದ, ಇದರ ಜತೆಗೆ ಮನೆಯಲ್ಲಿ ಮಹಿಳೆಯೊಬ್ಬರನ್ನು ಇಟ್ಟುಕೊಂಡಿದ್ದ ಎಂದು ಹೇಳಲಾಗಿದೆ.
ಪ್ರತಿದಿನ ಮಾಜಿ ಪತ್ನಿಯ ಕೋಪದಲ್ಲಿ ಮಕ್ಕಳಿಗೆ ಹೊಡೆಯುತ್ತಿದ್ದ ಎಂದು ಹೇಳಲಾಗಿದೆ. ಇದೀಗ ಮಗನ್ನು ಆಸ್ಪತ್ರೆ ಸೇರಿಸಲಾಗಿದ್ದು, ತಾಯಿ ಚಿತ್ರಾ ನಾಯ್ಕ ನೋಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಡ-ಹೆಂಡತಿ ಜಗಳದಲ್ಲಿ ಕೂಸಿಗೆ ಗಾಯವಾಯ್ತು! ಮಗುವಿನ ಮೇಲೆ ತಂದೆಯಿಂದ ಮನಸೋ ಇಚ್ಛೆ ಹಲ್ಲೆ

