February 9, 2026
Monday, February 9, 2026
spot_img

ದೆಹಲಿ ಗಲಭೆ ಪ್ರಕರಣದಲ್ಲಿ ಜಾಮೀನು ಅರ್ಜಿ ವಜಾ: ಉಮರ್ ಖಾಲಿದ್ ಮೊದಲ ರಿಯಾಕ್ಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಗಲಭೆಆರೋಪದಲ್ಲಿ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್‌ಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.

ಇನ್ನೂ ಸುಪ್ರೀಂಕೋರ್ಟ್ ತೀರ್ಪು ಕುರಿತು ಪ್ರತಿಕ್ರಿಯಿಸಿರುವ ಖಾಲಿದ್, ಇತರರಿಗೆ ಜಾಮೀನು ದೊರಕಿರುವುದರಿಂದ ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಭೇಟಿಗಾಗಿ ನಾಳೆ ಬರುತ್ತೇನೆ ಎಂದು ಲಹಿರಿ ಪ್ರತಿಕ್ರಿಸಿದ್ದು, Good good aa jana, Ab yahi zindagi hai ಎಂದು ಖಾಲಿದ್ ಹೇಳಿದ್ದಾರೆ.

ಉಮರ್ ಜೊತೆಗಿನ ಮಾತುಕತೆಯ ವಿವರಗಳನ್ನು ಅವರ ಸಹಚರ ಬನೊಜೋತ್ಸಾ ಲಹಿರಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಇದೇ ಪ್ರಕರಣದಲ್ಲಿ ಇತರ ಐವರು ಸಹ ಆರೋಪಿಗಳಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಇದನ್ನೂ ಓದಿ: ದೆಹಲಿ ಗಲಭೆ ಪ್ರಕರಣ: ಐವರಿಗೆ ಸಿಕ್ಕ ಜಾಮೀನು ಉಮರ್‌ ಖಾಲಿದ್‌, ಶಾರ್ಜಿಲ್‌ಗೆ ಯಾಕೆ ಸಿಕ್ಕಿಲ್ಲ?

ಮೇಲ್ನೋಟಕ್ಕೆ ಅವರ ವಿರುದ್ಧ ಆರೋಪ ನಿಜ ಎಂದು ತೋರುತ್ತದೆ ಎಂದಿರುವ ನ್ಯಾಯಾಲಯ, ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಪ್ರಕರಣವಿದೆ ಎಂದು ಹೇಳಿದೆ. 2020ರ ಸೆಪ್ಟೆಂಬರ್ 13 ರಿಂದಲೂ ಖಾಲಿದ್ ಜೈಲಿನಲ್ಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !