Monday, December 22, 2025

ಬೈರತಿ ಬಸವರಾಜುಗೆ ಸಿಗದ ನಿರೀಕ್ಷಣಾ ಜಾಮೀನು: ಕೋರ್ಟ್ ವಿಚಾರಣೆ ನಾಳೆಗೆ ಮುಂದೂಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜು ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಇಂದು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ನಡೆಸಿತು. 

ಶಾಸಕ ಭೈರತಿ ಬಸವರಾಜು ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಿರುವುದಾಗಿ ತಿಳಿದುಬಂದಿದೆ.
ತನಿಖೆಯಿಂದ ಪಾರಾಗಲು ಬೈರತಿ ಬಸವರಾಜು ಯತ್ನಿಸಿಲ್ಲ. ತನಿಖೆಗೆ ಸಹಕರಿಸುವುದಾಗಿ ಹೇಳಿಯೇ ಸಿಆರ್ ಪಿಸಿ 482 ಅರ್ಜಿ ಹಿಂಪಡೆದಿದ್ದಾರೆ. ಸಿಬಿಐ ತನಿಖೆಗೆ ವಹಿಸುವಂತೆ ಸ್ಪೀಕರ್ ಗೂ ಬೈರತಿ ಬಸವರಾಜು ಪತ್ರ ಬರೆದಿದ್ದಾರೆ. ನಿಜವಾದ ಆರೋಪಿ ಯಾರೆಂಬ ಬಗ್ಗೆ ತನಿಖೆಯಾಗಬೇಕು. ಸಿಐಡಿ ಪೊಲೀಸರು ಒಮ್ಮೆಯೂ ಸಮನ್ಸ್ ನೀಡಿಲ್ಲ ಎಂದು  ಬೈರತಿ ಬಸವರಾಜು ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಾಡಿದ್ದರು. 

ಇನ್ನೂ ಸಂಜೆ ಕೋರ್ಟ್ ಗೆ ಸಿಐಡಿ ಅಧಿಕಾರಿಗಳು  ಜಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು.  4236 ಪುಟಗಳ ಚಾರ್ಜ್ ಶೀಟ್ ಅನ್ನು ಸಿಐಡಿ ಅಧಿಕಾರಿಗಳು ಕೋರ್ಟ್ ಗೆ ಸಲ್ಲಿಕೆ ಮಾಡಿದ್ದರು. ಒಂದನೇ ಆರೋಪಿಯಿಂದ ನಾಲ್ಕು ಹಾಗೂ ಆರರಿಂದ 19ನೇ ಆರೋಪಿಗಳ ವಿರುದ್ದ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.  ಐದನೇ ಆರೋಪಿ  ಶಾಸಕ ಬೈರತಿ ಬಸವರಾಜ್ ವಿರುದ್ದ ಸದ್ಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿಲ್ಲ.  

ಶಾಸಕ ಬೈರತಿ ಬಸವರಾಜು ತಲೆ ಮರೆಸಿಕೊಂಡಿದ್ದು, ಹುಡುಕಾಟ ಮುಂದುವರೆದಿದೆ ಎಂದು  ಬೈರತಿ ಬಸವರಾಜು ಬಗ್ಗೆ ಚಾರ್ಜ್‌ಶೀಟ್‌ನಲ್ಲಿ  ಉಲ್ಲೇಖ ಮಾಡಲಾಗಿದೆ. ಬೈರತಿ ಬಸವರಾಜು ಬಂಧನವೂ ಆಗಿಲ್ಲ. ವಿಚಾರಣೆಯೂ ನಡೆದಿಲ್ಲ. ಹೀಗಾಗಿ ಶಾಸಕ ಬೈರತಿ ಬಸವರಾಜ್ ವಿರುದ್ದ ತನಿಖೆ ಮುಂದುವರೆದಿರೋದಾಗಿ ಮಾಹಿತಿಯನ್ನು ಉಲ್ಲೇಖಿಸಿದ್ದಾರೆ. ಇಪ್ಪತ್ತನೇ ಆರೋಪಿ ಅಜಿತ್ ವಿರುದ್ದವೂ ತನಿಖೆ ಮುಂದುವರೆದಿದೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ. 

error: Content is protected !!