January15, 2026
Thursday, January 15, 2026
spot_img

Bamboo Rice | ಬಿದಿರು ಅಕ್ಕಿಯಿಂದ ಅನ್ನ ಮಾಡಿ ತಿಂದ್ರೆ ಒಳ್ಳೆದಾ? ಇದರ ವಿಶೇಷತೆ ಏನು?

ಅರಣ್ಯದ ಒಳಗಿಂದ ನಮ್ಮ ಊಟದ ತಟ್ಟೆವರೆಗೆ ಬರುವ ಅಪರೂಪದ ಧಾನ್ಯವೇ Bamboo Rice ಅಥವಾ ಬಿದಿರು ಅಕ್ಕಿ. ಸಾಮಾನ್ಯ ಅಕ್ಕಿಗಿಂತ ವಿಭಿನ್ನವಾದ ಈ ಅಕ್ಕಿ, ಬಿದಿರು ಗಿಡ ಹೂ ಬಿಟ್ಟಾಗ ಮಾತ್ರ ದೊರೆಯುತ್ತದೆ. ವರ್ಷಕ್ಕೆ ಒಂದೇ ಬಾರಿ ಸಿಗುವ ಕಾರಣ ಇದನ್ನು “ಕಾಡಿನ ವಿಶೇಷ ಧಾನ್ಯ” ಎಂದೇ ಕರೆಯುತ್ತಾರೆ. ಈಗ ಆರೋಗ್ಯ ಜಾಗೃತಿಯ ಯುಗದಲ್ಲಿ ಬಿದಿರು ಅಕ್ಕಿಗೆ ಮತ್ತೆ ಭಾರೀ ಬೇಡಿಕೆ ಹೆಚ್ಚುತ್ತಿದೆ.

ಬಂಬೂ ರೈಸ್ ಆರೋಗ್ಯಕ್ಕೆ ಎಷ್ಟು ಒಳ್ಳೆಯದು?
ಬಿದಿರು ಅಕ್ಕಿ ಫೈಬರ್, ಪ್ರೋಟೀನ್, ಪೊಟ್ಯಾಸಿಯಂ ಮತ್ತು ಆಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಮಲಬದ್ಧತೆ ಕಡಿಮೆ ಮಾಡುತ್ತದೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಸಹಕಾರಿ. ರಕ್ತದ ಶುದ್ಧೀಕರಣಕ್ಕೆ ಸಹ ಇದನ್ನು ಉಪಯುಕ್ತವೆಂದು ಹೇಳಲಾಗುತ್ತದೆ.

  • ಮೆಟಾಬಾಲಿಸಂ ಮತ್ತು ತೂಕ ನಿಯಂತ್ರಣ: ಇದರಲ್ಲಿ ಕ್ಯಾಲೊರಿ ಕಡಿಮೆ ಹಾಗೂ ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಅದರಿಂದ ತೂಕ ಕಡಿಮೆ ಮಾಡಿಕೊಳ್ಳುವವರಿಗೆ ಇದು ಉತ್ತಮ ಆಯ್ಕೆ.
  • ಎಲ್ಲಿ ಸಿಗುತ್ತದೆ?: ಬಿದಿರು ಅಕ್ಕಿ ಸಾಮಾನ್ಯವಾಗಿ ಕರ್ನಾಟಕದ ಮಲೆನಾಡು ಭಾಗ, ಕೇರಳ, ಆಂಧ್ರಪ್ರದೇಶ, ಒಡಿಶಾ ಮತ್ತು ಮಧ್ಯ ಭಾರತದ ಅರಣ್ಯ ಪ್ರದೇಶಗಳಲ್ಲಿ ದೊರೆಯುತ್ತದೆ. ಈಗ ಕೆಲವು ಆರ್ಗಾನಿಕ್ ಸ್ಟೋರ್‌ಗಳು ಹಾಗೂ ಆನ್‌ಲೈನ್ ಮಾರುಕಟ್ಟೆಗಳಲ್ಲೂ ಲಭ್ಯ.
  • ಇದರ ವಿಶೇಷತೆ ಏನು?: ಇದು ವರ್ಷಕ್ಕೆ ಒಮ್ಮೆ ಮಾತ್ರ ಸಿಗುವ ಧಾನ್ಯ. ಸಾಮಾನ್ಯ ಅಕ್ಕಿಗಿಂತ ಸ್ವಲ್ಪ ಗಟ್ಟಿಯಾಗಿದ್ದು, ಸುವಾಸನೆ ಬೀರುವ, ವಿಶೇಷ ರುಚಿ ಹೊಂದಿರುತ್ತದೆ. ದೀರ್ಘಕಾಲ ಸಂಗ್ರಹಿಸಬಹುದಾದ ನೈಸರ್ಗಿಕ ಧಾನ್ಯವೂ ಹೌದು.
  • ಯಾರು ಸೇವಿಸಬಹುದು?: ಮಧುಮೇಹ, ಜೀರ್ಣ ಸಮಸ್ಯೆ, ದೇಹದ ದೌರ್ಬಲ್ಯ ಇರುವವರು ನಿಯಮಿತವಾಗಿ ಬಳಸುವುದರಿಂದ ಉತ್ತಮ ಪ್ರಯೋಜನ ಪಡೆಯಬಹುದು.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

Most Read

error: Content is protected !!